ಬೆಂಗಳೂರು: ಅಕ್ರಮವಾಗಿ ಬೆಂಗಳೂರಿನಲ್ಲಿ ನೆಲೆಸಿದ್ದು ಬಂಧನಕ್ಕೊಳಗಾಗಿರುವ ಪಾಕಿಸ್ತಾನ ಮೂಲದ ವ್ಯಕ್ತಿಗಳ ವಿಚಾರಣೆ ನಡೆಸಿದಾಗ ಕೆಲವೊಂದು ಆಘಾತಕಾರೀ ವಿಚಾರಗಳು ಬಹಿರಂಗವಾಗಿದೆ.
ಬೆಂಗಳೂರಿನಲ್ಲಿದ್ದುಕೊಂಡು ಧರ್ಮ ಪ್ರಚಾರ ಕೆಲಸ ಮಾಡುತ್ತಿದ್ದ ಪಾಕಿಸ್ತಾನದ ದಂಪತಿ ಸೇರಿದಂತೆ ಕೆಲವರನ್ನು ಬಂಧಿಸಲಾಗಿತ್ತು. ಅವರನ್ನು ಪೊಲೀಸರು ಈಗ ತೀವ್ರ ವಿಚಾರಣೆಗೊಳಪಡಿಸುತ್ತಿದ್ದಾರೆ. ಪಾಕಿಸ್ತಾನಿ ಪ್ರಜೆಗಳಿಗೆ ಭಾರತ ವಿರೋಧಿ ಚಟುವಟಿಕೆಗಳನ್ನು ಮಾಡಲು ಎಲ್ಲಿಂದ ನಿರ್ದೇಶನ ಬರುತ್ತಿತ್ತು ಎಂಬ ವಿಚಾರ ಈಗ ಬೆಳಕಿಗೆ ಬಂದಿದೆ.
ಲಂಡನ್ ನಲ್ಲಿದ್ದ ವ್ಯಕ್ತಿಯೊಬ್ಬ ಸಲಹೆ ಸೂಚನೆಗಳ ಪ್ರಕಾರ ಪಾಕಿಸ್ತಾನ ಪ್ರಜೆಗಳು ಇಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಇವರೆಲ್ಲ ಸೂಫಿ ಪಂಗಡಕ್ಕೆ ಸೇರಿದವರಾಗಿದ್ದರು. ಎಲ್ಲರಿಗೂ ಧರ್ಮ ಪ್ರಚಾರ ಮಾಡಲು ಸೂಚನೆ ಬರುತ್ತಿತ್ತು. ಬಂಧಿತರ ಗುಂಪಿನಲ್ಲಿ ಇನ್ನೂ ಹಲವರು ಉತ್ತರ ಭಾರತದಲ್ಲಿದ್ದಾರೆ ಎಂದು ತಿಳಿದುಬಂದಿದೆ. ಇವರೆಲ್ಲರನ್ನೂ ಪಾಕಿಸ್ತಾನಕ್ಕೆ ಕಳುಹಿಸಲು ರಾಯಭಾರಿಗೆ ಪತ್ರ ಬರೆಯಲು ಸಿದ್ಧತೆ ನಡೆದಿದೆ.
ತನಿಖೆ ವೇಳೆ, ಯಾರೂ ಉಗ್ರ ಚಟುವಟಿಕೆಯಲ್ಲಿ ಭಾಗಿಯಾಗಿರುವುದು ಕಂಡುಬಂದಿಲ್ಲ. ಆದರೆ ಧರ್ಮ ಪ್ರಚಾರವೇ ಇವರ ಉದ್ದೇಶವಾಗಿತ್ತು. ಮನೆ ಒಳಗೇ ಇದ್ದುಕೊಂಡು ಧರ್ಮ ಪ್ರಚಾರ ಮಾಡುತ್ತಿದ್ದರು. ಈವರೆಗೆ 23 ಮಂದಿ ಬಂಧಿತರಾಗಿದ್ದಾರೆ. ಪರ್ವೇಜ್ ಎಂಬಾತ ಪ್ರಮುಖ ಆರೋಪಿ. ಎಲ್ಲರಿಗೂ ಲಂಡನ್ ನಿಂದಲೇ ಸೂಚನೆ ಬರುತ್ತಿತ್ತು.