Publish Date: Sun, 24 Mar 2019 (20:23 IST)
Updated Date: Sun, 24 Mar 2019 (20:25 IST)
ಕೆಪಿಸಿಸಿ ಮುಖಂಡರ ಕ್ಷೇತ್ರದಲ್ಲಿಯೇ ಕೈ ಪಾಳೆಯದಲ್ಲಿ ಬಂಡಾಯ ಸ್ಪೋಟಗೊಂಡಿದೆ.
ಬೀದರ್ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಈಶ್ವರ ಖಂಡ್ರೆ ಅವರನ್ನ ಫೈನಲ್ ಮಾಡಿದ ಹಿನ್ನಲೆಯಲ್ಲಿ ಕಾಂಗ್ರೆಸ್ ಪಾಳೆಯದಲ್ಲಿ ಅಸಮಾಧಾನ ಸ್ಫೋಟಗೊಂಡಿದೆ.
ಅಲ್ಪಸಂಖ್ಯಾತರ ಕೋಟಾದಡಿ ಆಯಾಜ್ ಖಾನ್ ಗೆ ಕೈ ಟಿಕೆಟ್ ತಪ್ಪಿದ್ದಕ್ಕೆ ಅಸಮಾಧಾನ ವ್ಯಕ್ತವಾಗಿದೆ. ಬೀದರ್ ಮಿಲ್ಲಿ ಕೌನ್ಸಿಲ್ ನ ಅಧ್ಯಕ್ಷ ಹಾಗೂ ಆಯಾಜ್ ಖಾನ್ ಬೆಂಬಲಿಗರಿಂದ ಆಕ್ರೋಶ ಕೇಳಿಬಂದಿದೆ.
ಆಯಾಜ್ ಖಾನ್ ಕಾಂಗ್ರೆಸ್ ಪಕ್ಷದ ಮುಖಂಡ, ಅಲ್ಪಸಂಖ್ಯಾತ ಸಮುದಾಯದ ಪ್ರಬಲ ನಾಯಕರಾಗಿದ್ದಾರೆ. ಬೇರೆ ಪಕ್ಷದಿಂದ, ಸ್ವತಂತ್ರ್ಯ ಅಭ್ಯರ್ಥಿಯಾಗಿ ಸ್ಪರ್ಧಿಸಲು ಆಯಾಜ್ ಖಾನ್ ಗೆ ಬೆಂಬಲಿಗರು ಒತ್ತಾಯ ಮಾಡುತ್ತಿದ್ದಾರೆ.
ಕಾರ್ಯಕರ್ತರ ಜೊತೆ ಚರ್ಚೆ ಮಾಡಿ ಮುಂದಿನ ನಡೆ ತಿಳಿಸುವುದಾಗಿ ಹೇಳಿದ್ದಾರೆ ಆಯಾಜ್ ಖಾನ್. ಇದರಿಂದ ಬೀದರ್ ಕಾಂಗ್ರೆಸ್ ನಲ್ಲಿ ಬಂಡಾಯದ ಬಾವುಟ ಹಾರಿದಂತಾಗಿದ್ದು, ಅದು ಯಾವ ಹಂತಕ್ಕೆ ಹೋಗಲಿದೆ ಗೊತ್ತಿಲ್ಲ.