Publish Date: Thu, 29 Jun 2023 (16:02 IST)
Updated Date: Thu, 29 Jun 2023 (21:03 IST)
ಸಾರ್ವಜನಿಕರ ಜೇಬಿಗೆ ಕತ್ತರಿ ಹಾಕಲು ಹೊಟೇಲ್ ಸಂಘ ತಯಾರಿ ಮಾಡಿಕೊಂಡಿದೆ.ಹಾಲು, ಅಕ್ಕಿ ದರ ಏರಿಕೆಯ ಬಿಸಿ ಬಿಸಿ ಚರ್ಚೆ ಮಾಡಿದೆ.ಚರ್ಚೆಯ ಬಿಸಿ ಹೋಟೆಲ್ ತಿಂಡಿ ತಿನಿಸು ಪ್ರಿಯರ ಮೇಲೆ ಬೀಳೋ ಸಾಧ್ಯತೆ ಇದೆ. ಹೋಟೆಲ್ಗಳಲ್ಲಿ ಕಾಫಿ, ಟೀ, ತಿಂಡಿ ಬೆಲೆ ಏರಿಕೆಯ ಎಚ್ಚರಿಕೆ ಕೊಟ್ಟ ಹೋಟೆಲ್ ಮಾಲೀಕರು ಕೊಟ್ಟಿದ್ದಾರೆ
ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿಸಿ ರಾವ್ ಈ ವಿಷಯವಾಗಿ ಪ್ರತಿಕ್ರಿಯಿಸಿದ್ದು,ಒಂದು ಕಡೆ ವಿದ್ಯುತ್ ದರ ಹೆಚ್ಚಳ, ಇನ್ನೊಂದು ಕಡೆ ಹಾಲಿನ ದರ ಹೆಚ್ಚಳ ಸಾಧ್ಯತೆ ಇದೆ.ಹೀಗಾಗಿ ಹೋಟೆಲ್ ನಲ್ಲಿ ಉಪಯೋಗಿಸುವ ಗ್ಯಾಸ್ , ತರಕಾರಿ , ಬೇಳೆ ಸೇರಿದಂತೆ ಎಲ್ಲ ಪದಾರ್ಥಗಳ ಬೆಲೆ ಏರಿಕೆಯಾಗಿದೆ.ದರ ಏರಿಕೆಯ ಹೊಡೆತ ನಮ್ಮ ಉದ್ಯಮದ ಮೇಲೂ ಪರಿಣಾಮ ಬೀರುತ್ತಿದೆ.ಅಗತ್ಯವಾಗಿ ನಾವು ಕೂಡ ದರ ಏರಿಕೆ ಮಾಡಲೇ ಬೇಕಾದ ಅನಿವಾರ್ಯತೆ ಇದೆ.ಇನ್ಮುಂದೆ ಕಾಫಿ, ಟೀ, ತಿಂಡಿ, ಊಟದ ದರ ಹೆಚ್ಚಳವಾಗಲಿದೆ.ಹೋಟೆಲ್ ಮಾಲೀಕರ ಸಂಘ ದರ ಹೆಚ್ಚಳಕ್ಕೆ ಚರ್ಚೆ ನಡೆಸುತ್ತಿದ್ದೇವೆ ಎಂದು ಹೊಟೇಲ್ ಮಾಲೀಕರ ಸಂಘದ ಅಧಕ್ಯ ಪಿಸಿ ರಾವ್ ಹೇಳಿದ್ದಾರೆ.