Webdunia - Bharat's app for daily news and videos

Install App

ಬಿಪಿಎಲ್ ಕಾರ್ಡ್ ದಾರರಿಗೆ ಶಾಕ್!

Webdunia
ಸೋಮವಾರ, 23 ಅಕ್ಟೋಬರ್ 2023 (14:21 IST)
ರಾಜ್ಯ ಸರ್ಕಾರದಿಂದ ಮತ್ತೊಂದು ಶಾಕ್ ಎದುರಾಗಿದೆ.ಪಡಿತರ ಪಡೆಯದವರ ರೇಷನ್ ಕಾರ್ಡ್ ಜೊತೆ ಹಲವು ಸೌಲಭ್ಯವೂ ಕಡಿತವಾಗಿದೆ.6  ತಿಂಗಳಿಂದ ಪಡಿತರ ಪಡೆಯದ ಬಿಪಿಎಲ್ ಕಾರ್ಡ್ ಗಳನ್ನು ರದ್ದು ಮಾಡಲು ಸರ್ಕಾರ ಕ್ರಮ ಕೈಗೊಂಡಿದೆ.ಇದರಿಂದ ಪಡಿತರ ಚೀಟಿ ಜೊತೆಗೆ ಸೌಲಭ್ಯವೂ ಕಡಿತವಾಗುವ ಆತಂಕದಲ್ಲಿ ಲಕ್ಷಾಂತರವ ಕುಟುಂಬಗಳಿದೆ.

ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಗರಿಬ್ ಕಲ್ಯಾಣ ಅನ್ನ  ಯೋಜನೆಯಡಿ ಪಡಿತರ ಪಡೆದುಕೊಳ್ಳದ ಬಿಪಿಎಲ್ ಕಾರ್ಡ್ ರದ್ದು ಮಾಡಲು ಸರ್ಕಾರ ಕ್ರಮ ಕೈಗೊಂಡಿದೆ.ರಾಜ್ಯದಲ್ಲಿ 1,16,95,029 ಬಿಪಿಎಲ್ ಕಾರ್ಡ್ ದಾರರಿದ್ದಾರೆ.ಆರು ತಿಂಗಳಿನಿಂದ 3.40 ಲಕ್ಷ ಕಾರ್ಡ್ ದಾರರು ಪಡಿತರ ಪಡೆದುಕೊಂಡಿಲ್ಲ.ಇಂತಹ ಕಾರ್ಡ್ ಗಳನ್ನು ರದ್ದು ಮಾಡಲು ಸರ್ಕಾರ ಸೂಚನೆ ನೀಡಿದೆ.ಪಡಿತರ ಪಡೆಯದ ಕಾರ್ಡ್ ದಾರರಿಗೆ ಯಾವುದೇ ನೋಟಿಸ್ ನೀಡದೆ ಕಾರ್ಡ್ ಗಳನ್ನು ರದ್ದು ಮಾಡಲಾಗುತ್ತಿದೆ.

ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವವರು ಚಿಕಿತ್ಸೆ ಪಡೆಯಲು ಪಿಂಚಣಿ ಸೌಲಭ್ಯ, ಆರ್‌ಟಿಇ ಶಿಕ್ಷಣ ಮೊದಲಾದ ಸೌಲಭ್ಯಗಳನ್ನು ಪಡೆಯಲು ಬಿಪಿಎಲ್ ಕಾರ್ಡ್ ನಿಂದ ಅನುಕೂಲವಾಗಿದೆ.ಕಾರಣಾಂತರದಿಂದ ಕೆಲವರು ಪಡಿತರ ಪಡೆದುಕೊಳ್ಳುತ್ತಿಲ್ಲ.ಇದರಿಂದ ಸರ್ಕಾರಕ್ಕೆ ವಾರ್ಷಿಕ ಸುಮಾರು 60 ಕೋಟಿ ರೂ. ಉಳಿತಾಯವಾಗುತ್ತದೆ.ಹೀಗಿದ್ದರೂ ಪಡಿತರ ಪಡೆಯದವರ ಕಾರ್ಡ್ ರದ್ದು ಮಾಡುವುದರಿಂದ ಲಕ್ಷಾಂತರ ಕುಟುಂಬಗಳಿಗೆ ಅನ್ಯಾಯವಾಗುತ್ತದೆ.ಹಾಗೆಯೇ ಕೇಂದ್ರ ಸರ್ಕಾರದ ಯೋಜನೆಗಳನ್ನು ಸಹ ಪಡೆಯದಂತಾಗಿದೆ.ಬುಧವಾರದಿಂದ ರದ್ಧತಿಯ ಕ್ರಮವನ್ನು ಇಲಾಖೆ ಮಾಡಲಿದೆ.ಇನ್ನು ಯಾವ ರೀತಿಯಲ್ಲಿ ರದ್ಧತಿ ಮಾಡಬೇಕು?ಮುಂದೆ ರದ್ಧತಿ ಆದವರೀಗೆ ಹೊಸ ರೇಷನ್ ಕಾರ್ಡ್ ಅರ್ಜಿ ಹಾಕುವುದಕ್ಕೆ ಅನುಮತಿ ಕೊಡಬೇಕೋ ಬೇಡವೋ ಅನ್ನೋದು ಇಲಾಖೆ ಗಂಭೀರ ಚಿಂತನೆ ನಡೆಸಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಅವಧಿ ಮುಗಿದ ಚಾಕೋಲೇಟ್ ತಿನ್ನಕ್ಕೆ ಯೋಗ್ಯವಲ್ಲವೆಂದು ಕಸದ ರಾಶಿಗೆ ಎಸೆದ್ರೆ, ಈ ಜನ ಹೇಗೇ ನಡೆದುಕೊಂಡ್ರು ನೋಡಿ, Video

ಆಸ್ಪತ್ರೆಗೆ ತಂದಿದ್ದ 4ಲಕ್ಷದ ಚಿನ್ನವಿದ್ದ ಬ್ಯಾಗ್ ಎದ್ದು ನೋಡಿದಾಗ ನಾಪತ್ತೆ, ಹುಡುಕಾಟ ನಡೆಸಿದಾಗ ನಾಯಿ ಬುದ್ದಿ ಬಟಾಬಯಲು, Video

ಉಡುಪಿ: ದೇವಾಲಯದ ಕೊಳದಲ್ಲಿ ಮುಳುಗಿ 9ನೇ ತರಗತಿಯ ಬಾಲಕ ಸಾವು

ಜವರಾಯನ ರೂಪದಲ್ಲಿ ಬಂದ ಬಲೆನೋ, ಅಪಘಾತದ ರಭಸಕ್ಕೆ ಹೇರ್‌ಸ್ಟೈಲಿಸ್ಟ್‌ ಸಾವು, Video

ನೋಂದಣಿ ನೇಮ್ ಪ್ಲೇಟ್ ಕಾಣದಂತೆ ಸ್ಟಿಕ್ಟರ್ ಅಳವಡಿಸಿ ಓಡಾಡಿಸುತ್ತಿದ್ದ ವಾಹನಗಳಿಗೆ ದಂಡ

ಮುಂದಿನ ಸುದ್ದಿ
Show comments