ಆ ಮಹಿಳೆಗೆ ಎದ್ದು ನಡೆದಾಡೋಕು ಸರಿಯಾಗಿ ಬರೋದಿಲ್ಲ. ಎದ್ದೇಳೋಕೆ ಬೇರೊಬ್ಬರ ಸಹಾಯ ಬೇಕೇ ಬೇಕು. ಆದರೂ ಆಕೆ ಡ್ರಗ್ ಡೀಲ್ ಮಾಫಿಯಾದೊಂದಿಗೆ ಕೈ ಜೋಡಿಸಿ ಮಾದಕ ವಸ್ತು ಮಾರೋಕೆ ಮುಂದಾಗಿದ್ದಳು.
ವೃದ್ಧೆಯ ಗಂಡ ಈ ಹಿಂದೆ ಮಾದಕ ವಸ್ತುಗಳನ್ನು ಸಾಗಿಸುತ್ತಿದ್ದನು. ಆತನ ಮರಣಾನಂತರ ಆತನ ಪತ್ನಿಯಾಗಿರೋ ರಾಜ್ರಾಣಿ ಈಗ ದಂಧೆಯನ್ನು ಮುಂದುವರಿಸಿದ್ದಾಳೆ.
ಈಗಾಗಲೇ ಐದಾರು ಬಾರಿ ಜೈಲಿನ ಮುಖ ನೋಡಿ ಬಂದಿರೋ ರಾಜ್ರಾಣಿಯನ್ನು ಅಕ್ರಮವಾಗಿ ಹೆರಾಯಿನ್ ಮಾರಾಟ ಮಾಡೋ ಆರೋಪದಲ್ಲಿ ನವದೆಹಲಿ ಪೊಲೀಸರು ಬಂಧನ ಮಾಡಿದ್ದಾರೆ.
ಪ್ರತಿಬಾರಿ ಅರೆಸ್ಟ್ ಆದಾಗಲೂ ರಾಜ್ರಾಣಿ ಅನಾರೋಗ್ಯ ಕಾರಣ ನೀಡಿ ಬೇಲ್ ಪಡೆದು ಹೊರಬಂದಿದ್ದಾಳೆ. ಇದೀಗ ಮತ್ತೆ ಡ್ರಗ್ ಡೀಲ್ ಮಾಡೋಳನ್ನು ಪೊಲೀಸರು ಬಂಧನ ಮಾಡಿದ್ದಾರೆ.