ಬ್ರಿಟನ್ : ಉಳಿದ ದೇಶಗಳಗೆ ಹೋಲಿಸಿದರೆ ಬ್ರಿಟನ್ ಜನರು ಮದ್ಯಪಾನ ಅಥವಾ ಡ್ರಗ್ಸ್ ಸೇವನೆ ನಂತರ ಹೆಚ್ಚು ಶಾರೀರಿಕ ಸಂಬಂಧ ಬೆಳೆಸುತ್ತಾರೆ ಎಂಬ ಅಂಶ ಇತ್ತೀಚೆಗೆ ನಡೆದ ಸಂಶೋಧನೆಯೊಂದರಿಂದ ತಿಳಿದುಬಂದಿದೆ.
ಗ್ಲೋಬಲ್ ಡ್ರಗ್ ಸಮೀಕ್ಷೆಯಡಿಯಲ್ಲಿ ಬ್ರಿಟನ್, ಅಮೆರಿಕಾ, ಕೆನಡಾ ಹಾಗೂ ಯುರೋಪ್ ರಾಷ್ಟ್ರಗಳ 22 ಸಾವಿರ ಜನರ ಮೇಲೆ ಈ ಸಂಶೋಧನೆ ನಡೆದಿದ್ದು, ಇದರಲ್ಲಿ ಶೇಕಡಾ 64ರಷ್ಟು ಬ್ರಿಟನ್ ಜನರು ಮದ್ಯಪಾನ ಮಾಡಿದಾಗ ಸಂಬಂಧ ಬೆಳೆಸ್ತಾರೆ ಎಂಬ ವಿಚಾರ ತಿಳಿದುಬಂದಿದೆ.
ಹಾಗೇ ಯುರೋಪ್ ದೇಶಗಳಲ್ಲಿ ಇದ್ರ ಸಂಖ್ಯೆ ಶೇಕಡಾ 60 ರಷ್ಟಿದ್ದರೆ ಅಮೆರಿಕಾದಲ್ಲಿ ಇದ್ರ ಸಂಖ್ಯೆ ಶೇಕಡಾ 55 ರಷ್ಟಿದೆ. ಹಾಗೇ ಇವರೆಲ್ಲಾ ಡ್ರಗ್ಸ್ ಸೇವಿಸಿದ ನಂತರ ಅಸುರಕ್ಷಿತ ಸೆಕ್ಸ್ ಗೆ ಮುಂದಾಗ್ತಾರೆ. ಇದು ಅನೇಕ ಸಮಸ್ಯೆಗೆ ಕಾರಣವಾಗುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.