Publish Date: Tue, 09 Nov 2021 (13:52 IST)
Updated Date: Tue, 09 Nov 2021 (13:36 IST)
ಮಂಗಳೂರು : ತಮ್ಮ ಕಚೇರಿಯಲ್ಲಿ ತರಬೇತಿಯಲ್ಲಿದ್ದ ಇಂಟರ್ನ್‌ಶಿಪ್ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಪರಾರಿಯಾಗಿರುವ ವಕೀಲ ಕೆ.ಎಸ್.ಎನ್.ರಾಜೇಶ್ ಭಟ್ ಇನ್ನೂ ಪತ್ತೆಯಾಗಿಲ್ಲ.
ಹಾಗಾಗಿ ವಕೀಲ ರಾಜೇಶ್ ಭಟ್ ವಿರುದ್ಧ ಈಗ ಲುಕ್ ಔಟ್ ನೋಟಿಸ್ ಜಾರಿ ಮಾಡಲಾಗಿದೆ. ಕೆ.ಎಸ್.ಎನ್.ರಾಜೇಶ್ ಭಟ್ ದೇಶ ಬಿಟ್ಟು ತೆರಳದಂತೆ, ಮತ್ತು ಅವರ ಪತ್ತೆಗೆ ದೇಶದ ಎಲ್ಲ ಏರ್ಪೋರ್ಟ್ಗಳಲ್ಲಿ ಲುಕ್ ಔಟ್ ನೋಟಿಸ್ ಜಾರಿ ಮಾಡಲಾಗಿದೆ.
ಈ ಮಧ್ಯೆ ಪ್ರಕರಣದ ತನಿಖೆ ತೀವ್ರಗೊಳಿಸಿರುವ ಮಂಗಳೂರು ಪೊಲೀಸರು ಆರೋಪಿ ವಕೀಲ ಕೆ.ಎಸ್.ಎನ್. ರಾಜೇಶ್ ಭಟ್ಗೆ ಸೇರಿದ ಎಲ್ಲಾ ಬ್ಯಾಂಕ್ ಖಾತೆಗಳನ್ನು ಸೀಜ್ ಮಾಡಿಸಿದ್ದಾರೆ. ತಮಿಳುನಾಡು, ಆಂಧ್ರ, ಕೇರಳ, ಮಹಾರಾಷ್ಟ್ರ ಸೇರಿದಂತೆ ಇತರೆ ರಾಜ್ಯಗಳ ಪೊಲೀಸರ ನೆರವು ಸಹ ಕೇಳಿದ್ದಾರೆ. ಪ್ರಕರಣ ಬೇಧಿಸಲು ಮಂಗಳೂರು ಪೊಲೀಸ್ ಕಮೀಷನರ್ ಎನ್. ಶಶಿಕುಮಾರ್ ಅವರು 6 ತಂಡಗಳನ್ನು ರಚಿಸಿದ್ದಾರೆ.