Daily Horoscope
✕

ಏಳು ಗಂಡಂದಿರಿಗೆ ಒಬ್ಬಳೆ ಹೆಂಡತಿ ಮಾಡರ್ನ್ ದ್ರೌಪದಿ ..!!!

Webdunia
ಶನಿವಾರ, 24 ಸೆಪ್ಟಂಬರ್ 2022 (15:14 IST)
ತಮಿಳುನಾಡಿನ ಓರ್ವ ಮಹಿಳೆಯು ಸರಣಿ ಮದುವೆಗಳನ್ನಾಗಿ ಗಂಡಂದಿರಿಗೆ ಮೋಸ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಅಲ್ಲದೇ, ಏಳನೇ ಮದುವೆಯಾಗುತ್ತಿದ್ದಾಗಲೇ ಆರನೇ ಗಂಡ ಮೋಸಗಾತಿಯನ್ನು ಹಿಡಿದಿದ್ದಾರೆ.
 
ಹೌದು, ನಮಕ್ಕಲ್ ಜಿಲ್ಲೆಯ ಪರಮತಿವೆಲ್ಲೂರು ಸಮೀಪದ ಕಳ್ಳಿಪಾಳ್ಯಂನ ನಿವಾಸಿಯಾದ ಧನಪಾಲ್ ಎಂಬುವವರು ಇದೇ ತಿಂಗಳ ಆರಂಭದಲ್ಲಿ ಮಧುರೈ ಜಿಲ್ಲೆಯ ಸಂಧ್ಯಾ (26 ವರ್ಷ) ಎಂಬುವವರನ್ನು ಮದುವೆಯಾಗಿದ್ದರು. ಸಂಧ್ಯಾ ಕಡೆಯಿಂದ ಕೆಲವರು ಮಾತ್ರ ಮದುವೆಯಲ್ಲಿ ಪಾಲ್ಗೊಂಡಿದ್ದರು. ಕೆಲವೇ ದಿನಗಳಲ್ಲಿ ಸಂಧ್ಯಾ ಧನಪಾಲ್ ಮನೆಯಿಂದ ಕಾಣೆಯಾಗಿದ್ದರು. ಆಕೆಯ ಮೊಬೈಲ್ ಸಂಖ್ಯೆ ಮತ್ತು ಆಕೆಯ ಕೆಲವು ಸಂಬಂಧಿರನ್ನು ಸಂಪರ್ಕಿಸಲು ಧನಪಾಲ್ ಯತ್ನಿಸಿದ್ದರು. ಆದರೆ, ಎಲ್ಲ ಮೊಬೈಲ್​ ಸಂಖ್ಯೆಗಳು ಸ್ವಿಚ್ ಆಫ್ ಆಗಿದ್ದವು.
ಮನೆಯಿಂದ ಸಂಧ್ಯಾ ಹಾಗೂ ಮನೆಯಲ್ಲಿನ ಆಭರಣಗಳು, ಬೆಲೆಬಾಳುವ ವಸ್ತುಗಳು ನಾಪತ್ತೆ ಬಗ್ಗೆ ಧನಪಾಲ್ ಪರಮತಿ ವೆಲ್ಲೂರು ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದಾದ ಎರಡು ದಿನಗಲ್ಲಿ ಪರಮತಿ ವೆಲ್ಲೂರಿನಲ್ಲಿ ನೆಲೆಸಿರುವ ವ್ಯಕ್ತಿಯೊಬ್ಬರು ವಧುವಿನ ಹುಡುಕಾಟದಲ್ಲಿದ್ದಾಗ ಮತ್ತೊಬ್ಬ ಬ್ರೋಕರ್ ಧನಲಕ್ಷ್ಮಿ ಎಂಬುವವರಿಗೆ ಸಂಧ್ಯಾರ ಫೋಟೋ ಸಿಕ್ಕಿದೆ.
ಧನಪಾಲ್ ಸಂಧ್ಯಾರನ್ನು ಹಿಡಿಯಲು ಪೊಲೀಸರೊಂದಿಗೆ ಮದುವೆ ಮಂಟಪದಲ್ಲಿ ಕಾದು ಕುಳಿತಿದ್ದರು. ಮದುವೆಯಾಗಲು ಸಂಧ್ಯಾ ಹಾಗೂ ಆಕೆಯ ಸಂಬಂಧಿಕರಾದ ಅಯ್ಯಪ್ಪನ್, ಜಯವೇಲ್ ಮತ್ತು ಬ್ರೋಕರ್ ಧನಲಕ್ಷ್ಮಿ ಬರುತ್ತಿದ್ದಂತೆ ಎಲ್ಲರನ್ನೂ ಪೊಲೀಸರು ಬಂಧಿಸಿದ್ದಾರೆ. ಅಲ್ಲದೇ, ಪೊಲೀಸರ ತನಿಖೆಯಲ್ಲಿ ಬೆಚ್ಚಿಬೀಳಿಸುವ ಮಾಹಿತಿ ಹೊರಬಿದ್ದಿದೆ. ಸಂಧ್ಯಾ ಈಗಾಗಲೇ 5 ಜನರೊಂದಿಗೆ ಮದುವೆಯಾಗಿದ್ದು, ಧನಪಾಲ್ ಆರನೆಯವರಾಗಿದ್ದರು. ಈಗ ಏಳನೇ ಮದುವೆಯಾಗಲು ಮುಂದಾಗಿದ್ದರು ಎಂದು ಬಯಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪ್ರಧಾನಿ ಮೋದಿ ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಆಚರಿಸಿದ ಬಿಜೆಪಿ ನಾಯಕರು

ಮುಸ್ಲಿಮರೇ ಫಸ್ಟ್ ಎಂದಿದ್ದ ಅರವಿಂದ ಬೋಳಾರ್ ಈಗ ಕೈ ಮುಗಿದು ಹೀಗೆ ಬೇಡಿಕೊಂಡ್ರು

ದೇಶಸೇವೆಗೆ ಸಮರ್ಪಿಸಿಕೊಂಡ ಪ್ರಧಾನಿ ನರೇಂದ್ರ ಮೋದಿ ಜೀ: ವಿಜಯೇಂದ್ರ

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ಏಯ್ ನೀನೂ ಸ್ವಲ್ಪ ತಿನ್ನೋ… ನಂದಿ ತಿನ್ನಲಿಲ್ಲವೆಂದು ಕೋತಿ ಏನು ಮಾಡ್ತು ನೋಡಿ Video

ಮುಂದಿನ ಸುದ್ದಿ
Show comments