Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಪ್ರತ್ಯೇಕ ರಾಜ್ಯ: ಬಿಎಸ್ವೈ- ಉಮೇಶ ಕತ್ತಿ ತದ್ವಿರುದ್ಧ ಹೇಳಿಕೆ

ಪ್ರತ್ಯೇಕ ರಾಜ್ಯ: ಬಿಎಸ್ವೈ- ಉಮೇಶ ಕತ್ತಿ ತದ್ವಿರುದ್ಧ ಹೇಳಿಕೆ
ಬೆಳಗಾವಿ , ಮಂಗಳವಾರ, 31 ಜುಲೈ 2018 (20:12 IST)
ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಬೇಡಿಕೆ ಕುರಿತಂತೆ ಬೆಳಗಾವಿಯಲ್ಲಿ ಹಮ್ಮಿಕೊಂಡಿರುವ ಸ್ವಾಮೀಜಿಗಳ ನೇತೃತ್ವದ ಪ್ರತಿಭಟನೆಯಲ್ಲಿ ಬಿ.ಎಸ್.ಯಡಿಯೂರಪ್ಪ ಪ್ರತ್ಯೇಕ ರಾಜ್ಯ ಬೇಡವೆಂದರು ಮಾಡಿದರೆ, ಮಾಜಿ ಸಚಿವ ಉಮೇಶ ಕತ್ತಿ ಪ್ರತ್ಯೇಕತೆಯ ಕೂಗನ್ನ ಮತ್ತಷ್ಟು ಗಟ್ಟಿಗೊಳಿಸಿದ ಘಟನೆ ನಡೆದಿದೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರು ಮಠಾಧೀಶರದಲ್ಲಿ ಪ್ರತ್ಯೇಕ ರಾಜ್ಯದ ಬೇಡಿಕೆ ಬೇಡವೆಂದು ಮನವಿ ಮಾಡಿದರು. ಆಗಷ್ಟ 2ರಂದು ಕರೆ ಕೊಟ್ಟಿರುವ ಉತ್ತರ ಕರ್ನಾಟಕ 13 ಜಿಲ್ಲೆಗಳ ಬಂದ್ ಹಿಂಪಡೆಯುವಂತೆ ವಿನಂತಿಸಿಕೊಂಡರು. ನಾನೇ ಉತ್ತರ ಕರ್ನಾಟಕದ ಜನರ ಸಮಸ್ಯೆಗಳನ್ನ ಪರಿಹರಿಸುವಂತೆ ಸದನದ ಒಳಗೂ ಹೊರಗೂ ಹೋರಾಟ ಮಾಡುವೆ ಎಂದರು.

ಸಿಎಂ ಕುಮಾರಸ್ವಾಮಿ ಉತ್ತರ ಕರ್ನಾಟಕಕ್ಕೆ ಆಗಿರುವ ಅನ್ಯಾಯವನ್ನ ಸರಿ ಪಡಿಸುವುದನ್ನು ಬಿಟ್ಟು ನೀವು ಓಟ್ ಕೊಟ್ಟಿದ್ದೀರಾ. ಪ್ರತ್ಯೇಕ ರಾಜ್ಯ ಮಾಡಿಕೊಳ್ಳಿ ಹೋಗಿ ಎಂದು ಮಾತನಾಡಿದ್ದನ್ನ ಬಿಎಸ್ವೈ ಕಟುಶಬ್ಧಗಳಿಂದ ತೀರುಗೇಟು ನೀಡಿದರು. ನಾನೇ ಉತ್ತರ ಕರ್ನಾಟಕದ 13 ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಸಮಸ್ಯೆಗಳನ್ನ ಆಲಿಸುವೆ ಎಂದು ಬಿಎಸ್ವೈ ಹೇಳಿದರು.

ಇದೇ ವೇಳೆ ಮಾತನಾಡಿದ, ಮಾಜಿ ಸಚಿವ ಉಮೇಶ ಕತ್ತಿ, ನಾವು ಅಖಂಡ ಕರ್ನಾಟಕ ಅಭಿವೃದ್ಧಿ ಬಯಸಿದ್ದೇವೆ.  ಅಭಿವೃದ್ಧಿ ಆಗದಿದ್ದರೆ ನಾವು ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟಕ್ಕೂ ಸಿದ್ದವಾಗಿದ್ದೇವೆ. ಪ್ರತ್ಯೇಕ ರಾಜ್ಯ ಮಾಡಿಕೊಳ್ಳಲು ಗಟ್ಟಿಯಾಗಿದ್ದೇವೆ ಎಂದು ಹೇಳುವ ಮೂಲಕ ತಮ್ಮ ಪ್ರತ್ಯೇಕ ರಾಜ್ಯದ ನಿಲುವಿನ ಮೇಲೆ ಗಟ್ಟಿತನ ಪ್ರದರ್ಶಿಸಿದ್ರು.


Share this Story:

Follow Webdunia kannada

ಮುಂದಿನ ಸುದ್ದಿ

ಉ-ಕ ಸ್ವಾಮೀಜಿಗಳ ಹೋರಾಟ: ಶ್ರೀಗಳು ಹೇಳಿದ್ದೇನು ಗೊತ್ತಾ?