ಸೆಲ್ಫೀ ಪ್ರಿಯರೇ ಎಚ್ಚರ..!

Webdunia
ಸೋಮವಾರ, 28 ಫೆಬ್ರವರಿ 2022 (12:12 IST)
ಚಿಕ್ಕಬಳ್ಳಾಪುರ : ಖಾಸಗಿ ಬಸ್ ಸ್ಕೂಟಿಗೆ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ತಂದೆ, ತಾಯಿ ಹಾಗೂ ಮಗ ಸೇರಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಹೊನ್ನೇನಹಳ್ಳಿ ಗೇಟ್ ಬಳಿ ನಡೆದಿದೆ.
 
ಬೆಂಗಳೂರು ಮೂಲದ ದಂಪತಿ ಗೌಸ್(37), ಅಮ್ಮಾಜಾನ್(33) ಹಾಗೂ ಇವರ ಮಗ ರಿಯಾನ್(13) ಮೃತರು. ಗೌಸ್ ಮೂಲತಃ ಹೊಸಪೇಟೆಯವರು ಹಾಗೂ ಅಮ್ಮಾಜಾನ್ ಆಂಧ್ರಪ್ರದೇಶದ ಕದಿರಿಯದವರು. ಇವರು ಮದುವೆಯಾದ ನಂತರ ಬೆಂಗಳೂರಿಗೆ ಬಂದು ವಾಸ ಮಾಡುತ್ತಿದ್ದರು.

ಇಂದು ಬೆಳಗ್ಗೆ ಗೌಸ್, ಅಮ್ಮಾಜಾನ್ ಹಾಗೂ ಮಗ ರಾಯಾನ್ ಮೂವರು ಬೆಂಗಳೂರಿನಿಂದ ಚಿಕ್ಕಬಳ್ಳಾಪುರ ಮಾರ್ಗವಾಗಿ ಸ್ಕೂಟಿಯಲ್ಲಿ ಅಮ್ಮಾಜಾನ್ ಅವರ ತಂಗಿ ಮನೆ ಕದಿರಿಗೆ ಹೊರಟಿದ್ದರು. ಮಾರ್ಗಮಧ್ಯೆ ಫೋಟೋಸ್ ತೆಗೆದುಕೊಂಡು, ರೀಲ್ಸ್ ಮಾಡಿಕೊಂಡು ಸ್ಕೂಟಿಯಲ್ಲಿ ಜಾಲಿಟ್ರಿಪ್ ಮಾಡುತ್ತಿದ್ದರು.

ಚಿಕ್ಕಬಳ್ಳಾಪುರ ತಾಲೂಕಿನ ಹೊನ್ನೇನಹಳ್ಳಿ ಬಳಿ ಬೆಂಗಳೂರು ಕಡೆಯಿಂದ ಬರುತ್ತಿದ್ದವರು ತಿಂಡಿ ತಿನ್ನಲು ರಸ್ತೆ ಬದಿಯಲ್ಲಿರುವ ಹೋಟೆಲ್ಗೆ ಬೈಕ್ ತಿರುಗಿಸಿದ್ದಾರೆ. ಹೋಟೆಲ್ನಲ್ಲಿ ತಿಂಡಿ ತಿಂದು ಮರಳಿ ಬಾಗೇಪಲ್ಲಿ ಕಡೆಗೆ ಯೂಟರ್ನ್ ತೆಗೆದುಕೊಂಡಿದ್ದಾರೆ. ಆದರೆ ಅಷ್ಟರಲ್ಲೇ ಬಾಗೇಪಲ್ಲಿ ಕಡೆಯಿಂದ ಬಂದ ಖಾಸಗಿ ಬಸ್ ಸ್ಕೂಟಿ ಮೇಲೆ ಎರಗಿದೆ.

ಅಪಘಾತ ನಂತರ ಬಸ್ ಸ್ಥಳದಲ್ಲೇ ಬಿಟ್ಟು ಚಾಲಕ ಎಸ್ಕೇಪ್ ಆಗಿದ್ದಾನೆ. ಅಪಘಾತ ಮುನ್ನ ದಂಪತಿ ಮಗನ ಸಮೇತ ಮಾಡಿತೋ ರೀಲ್ಸ್, ಫೋಟೋಸ್ ನೋಡಿದ್ರೆ ಅಯ್ಯೋ ಪಾಪ ಅನಿಸದೆ ಇರದು. ಚಿಕ್ಕಬಳ್ಳಾಪುರ ಸಂಚಾರಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಹಿಂದೂ ವ್ಯಕ್ತಿ ನಿತಾಯಿ ರಾಯ್ ಚೌಧರಿಗೆ ಖುಲಾಯಿಸಿದ ಅದೃಷ್ಟ: ಬಾಂಗ್ಲಾ ಸಂಪುಟದಲ್ಲಿ ಮಹತ್ವದ ಖಾತೆ

ಸೆಕ್ಸ್‌ಗೆ ನಿರಾಕರಿಸಿದ ಸ್ನೇಹಿತೆಯನ್ನೇ ಕೊಂದರು ನಗುತ್ತಲೇ ಪ್ರತಿಕ್ರಿಯಿಸಿದ ಪಾಪಿ, ಇಲ್ಲಿ ನೋಡಿ

ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಸಂಭ್ರಮದ ವಾತಾವರಣ, ಕಾರಣ ಏನ್ ಗೊತ್ತಾ

ಗರ್ಭಿಣಿ ಪತ್ನಿಯನ್ನು ಕೊಂದು ಕೊಲೆ ನಾಟಕವಾಡಿದ ಪತಿ, ಸಿಕ್ಕಿಬಿದ್ದಿದ್ದು ಹೇಗೇ ಗೊತ್ತಾ

ಪತ್ನಿಯನ್ನೇ ಕತ್ತು ಹಿಸುಕಿ ಕೊಂದ ಇಸ್ರೋದ ನಿವೃತ್ತ ಉದ್ಯೋಗಿ, ಕಾರಣ ಕೇಳಿದ್ರೆ ಶಾಕ್‌

ಮುಂದಿನ ಸುದ್ದಿ
Show comments