ಚಿಕ್ಕಮಗಳೂರು : ಕಾಫಿನಾಡಿನ ಚಾರ್ಮಾಡಿ ಘಾಟಿಯಲ್ಲಿ ನಿಂತರೇ ಸ್ವರ್ಗಕ್ಕೆ ಮೂರೇ ಗೇಣು ಅನ್ಸತ್ತೆ. ಇಲ್ಲಿನ ಸೌಂದರ್ಯ ಕಂಡು ಪ್ರವಾಸಿಗರು, ದಾರಿಹೊಕ್ಕರು ನಿಂತಲ್ಲೇ ಕರಗಿ ನೀರಾಗ್ತಿದ್ದಾರೆ. ಚಾರ್ಮಾಡಿ ಒಡ
ಲ ದಟ್ಟ ಕಾನನದೊಳಗಿನ ಮಂಜಿನ ಕಣ್ಣಾಮುಚ್ಚಾಲೆ ಆಟ ಕಂಡು ನೋಡುಗರ ಮೂಕವಿಸ್ಮಿತರಾಗ್ತಿದ್ದಾರೆ. ಆದರೆ ಪ್ರಕೃತಿಯ ಈ ಸೌಂದರ್ಯವೇ ನೋಡುಗರನ್ನ ಬಲಿ ಪಡೆಯುತ್ತಾ ಎಂಬ ಆತಂಕ ಎದುರಾಗಿದೆ. ಯಾಕಂದ್ರೆ, ಈ ಮಾರ್ಗದಲ್ಲಿ ಸಂಚರಿಸೋ ಪ್ರವಾಸಿಗರು ಬಂಡೆ ಮೇಲೆ ಹತ್ತಿ ಮಂಗನಾಟ ಆಡ್ತಿರೋದು ಮತ್ತೊಂದು ಅನಾಹುತ ದಾರಿಯಾಗುತ್ತೆ ಎನ್ನಲಾಗುತ್ತಿದೆ.