Select Your Language

Notifications

webdunia
webdunia
webdunia
webdunia

ಸೆಲ್ಫಿ ಪ್ರಿಯರೇ ಎಚ್ಚರ!

ಚಾರ್ಮಾಡಿ ಘಾಟ್ನ ಜಾರುವ ಬಂಡೆಗಳ ಮೇಲೆ ಪ್ರವಾಸಿಗರ ಸೆಲ್ಫಿ ಹುಚ್ಚು: ಸ್ವಲ್ಪ ಯಾಮಾರಿದ್ರು ಡೇಂಜರ್!

ಸೆಲ್ಫಿ ಪ್ರಿಯರೇ ಎಚ್ಚರ!
ಚಿಕ್ಕಮಗಳೂರು , ಬುಧವಾರ, 30 ಜೂನ್ 2021 (08:07 IST)
ಚಿಕ್ಕಮಗಳೂರು : ಕಾಫಿನಾಡಿನ ಚಾರ್ಮಾಡಿ ಘಾಟಿಯಲ್ಲಿ ನಿಂತರೇ ಸ್ವರ್ಗಕ್ಕೆ ಮೂರೇ ಗೇಣು ಅನ್ಸತ್ತೆ. ಇಲ್ಲಿನ ಸೌಂದರ್ಯ ಕಂಡು ಪ್ರವಾಸಿಗರು, ದಾರಿಹೊಕ್ಕರು ನಿಂತಲ್ಲೇ ಕರಗಿ ನೀರಾಗ್ತಿದ್ದಾರೆ. ಚಾರ್ಮಾಡಿ ಒಡ


 



ಲ ದಟ್ಟ ಕಾನನದೊಳಗಿನ ಮಂಜಿನ ಕಣ್ಣಾಮುಚ್ಚಾಲೆ ಆಟ ಕಂಡು ನೋಡುಗರ ಮೂಕವಿಸ್ಮಿತರಾಗ್ತಿದ್ದಾರೆ. ಆದರೆ ಪ್ರಕೃತಿಯ ಈ ಸೌಂದರ್ಯವೇ ನೋಡುಗರನ್ನ ಬಲಿ ಪಡೆಯುತ್ತಾ ಎಂಬ ಆತಂಕ ಎದುರಾಗಿದೆ. ಯಾಕಂದ್ರೆ, ಈ ಮಾರ್ಗದಲ್ಲಿ ಸಂಚರಿಸೋ ಪ್ರವಾಸಿಗರು ಬಂಡೆ ಮೇಲೆ ಹತ್ತಿ ಮಂಗನಾಟ ಆಡ್ತಿರೋದು  ಮತ್ತೊಂದು ಅನಾಹುತ ದಾರಿಯಾಗುತ್ತೆ ಎನ್ನಲಾಗುತ್ತಿದೆ.
 
ನಿರಂತರ ಮಳೆಯಿಂದಾಗಿ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಸೌಂದರ್ಯವನ್ನ ವರ್ಣಿಸಲು ಪದಪುಂಜಗಳೇ ಸಾಲಲ್ಲ. ಕಣ್ಣು ಹಾಯಿಸದಲ್ಲೆಲ್ಲಾ ಹಸಿರೇ ಹಸಿರು. ದಾರಿಯುದ್ಧಕ್ಕೂ ನೂರಾರು ಜಲಪಾತಗಳು ನೋಡುಗರ ಕಣ್ಣನ್ನ ಕೋರೈಸುತ್ತಿದೆ. ಆದ್ರೆ, ಇಲ್ಲಿನ ಜಲಪಾತಗಳ ಬಳಿ ಪ್ರವಾಸಿಗರ ವರ್ತನೆ ಸ್ಥಳಿಯರು ಹಾಗೂ ಇತರೇ ಪ್ರವಾಸಿಗರಿಗೂ ಕೂಡ ಭಯ ತರಿಸುತ್ತಿದೆ. ಯಾಕಂದ್ರೆ, ಇಲ್ಲಿಗೆ ಬರ್ತಿರೋ ಪ್ರವಾಸಿಗರು ಹಾಗೂ ದಾರಿಹೊಕ್ಕರು ಬಂಡೆಗಳ ಮೇಲತ್ತಿ ನೀರು ಧುಮ್ಮಿಕ್ಕುವ ಜಾಗಕ್ಕೆ ಹೋಗಿ ಫೋಟೋ, ಸೆಲ್ಫಿ ಕ್ಲಿಕ್ಕಿಸಿಕೊಳ್ತಿರೋದು ಆತಂಕ ತಂದಿದೆ. ನೂರಾರು ಅಡಿ ಎತ್ತರದಿಂದ ಬಿದ್ದರೇ ಕೆಳಗೆ ಬರುವಷ್ಟರಲ್ಲಿ ಜೀವ ಇರುತ್ತೆ ಅನ್ನೋದು ಅನುಮಾನ. ಇಲ್ಲಿಗೆ ಬರುತ್ತಿರೋ ಪ್ರವಾಸಿಗರು ಇಂತಹಾ ಕುಚೇಷ್ಠೆಗೆ ಮುಂದಾಗ್ತಿರೋದಕ್ಕೆ ಸಂಪೂರ್ಣ ಬ್ರೇಕ್ ಹಾಕಬೇಕು ಅನ್ನೋದು ಸ್ಥಳಿಯರ ಆಗ್ರಹವಾಗಿದೆ.

ಚಾರ್ಮಾಡಿ ಘಾಟಿಯ ಬಂಡೆಯ ಮೇಲೆ ಇಂತಹಾ ಮಂಗನಾಟ ಆಡಲು ಹೋಗಿ ಪ್ರಾಣ ಕಳೆದುಕೊಂಡವರಿದ್ದಾರೆ. ನೂರಾರು ಅಡಿ ಎತ್ತರದಿಂದ ಜಾರಿ ಬಿದ್ದು ಕೈ-ಕಾಲು ಕಳೆದುಕೊಂಡವರು ಇದ್ದಾರೆ. ಸದಾ ನೀರು ಹರಿಯುವ ಜಾಗಕ್ಕೆ ಕಾಲಿಟ್ಟು ಜಾರಿ ಬಿದ್ದು ಮುಖ-ಮುಸುಡಿ ಜಜ್ಜಿಸಿಕೊಂಡವರು ಇದ್ದಾರೆ. ಆದರೂ, ಪ್ರವಾಸಿಗರ ಇಂತಹಾ ಮಂಗನಾಟ ನಿಂತಿಲ್ಲ. ವರ್ಷಪೂರ್ತಿ ಕಲ್ಲುಗಳ ಮೇಲೆ ಸದಾ ನೀರು ಹರಿಯೋದ್ರಿಂದ ಕಲ್ಲಿನ ಮೇಲೆ ಪಾಚಿ ಬೆಳೆದಿರುತ್ತೆ. ಒಂದು ಸೆಕೆಂಡ್ ಕೂಡ ಅಲ್ಲಿ ನಿಲ್ಲೋಕ್ ಆಗಲ್ಲ. ಅಂತಹಾ ಜಾಗದಲ್ಲಿ ಪ್ರವಾಸಿಗರ ಹುಚ್ಚಾಟ ಭಯ ಹುಟ್ಟಿಸುತ್ತಿದೆ. ಆದ್ರೆ, ಅರಣ್ಯ ಇಲಾಖೆಯಾಗ್ಲಿ, ಪೊಲೀಸ್ ಇಲಾಖೆಯಾಗ್ಲಿ ಅಲ್ಲಿ ಯಾವುದೇ ಸೂಕ್ತ ಕ್ರಮ ಕೈಗೊಳ್ಳದಿರೋದು ಪ್ರವಾಸಿಗರ ಹುಚ್ಚಾಟಕ್ಕೆ ಕಾರಣವಾಗಿದೆ. ಪೊಲೀಸರು ಗಸ್ತು ತಿರುಗದಿರೋದು ಕೂಡ ಒಂದು ಕಾರಣವಾಗಿದೆ. ಈ ಬಗ್ಗೆ ಸ್ಥಳಿಯರು ಹಲವಾರು ಬಾರಿ ಅರಣ್ಯ ಹಾಗೂ ಪೊಲೀಸರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ.


Share this Story:

Follow Webdunia kannada

ಮುಂದಿನ ಸುದ್ದಿ

ಮಂಡ್ಯದಲ್ಲಿ ಹಾವಳಿ ಎಬ್ಬಿಸಿದ್ದ ಸಕಲೇಶಪುರದ ಪುಂಡಾನೆ: ರೋಚಕ ಆಪರೇಷನ್ ಮೂಲಕ ಕೊನೆಗೂ ಸೆರೆ