Publish Date: Fri, 07 Apr 2023 (19:00 IST)
Updated Date: Fri, 07 Apr 2023 (18:45 IST)
ಚುನಾವಣಾ ದಿನಾಂಕ ಘೋಷಣೆ ಬೆನ್ನೆಲ್ಲೆ ರಾಜ್ಯ ಚೆಕ್ ಪೋಸ್ಟಗಳಲ್ಲಿ ಪೊಲೀಸರು ಹೈ ಅಲರ್ಟ್ ಆಗಿದ್ದಾರೆ.ಬೆಳಗಾವಿ ಜಿಲ್ಲೆ ನಿಪ್ಪಾಣಿ ತಾಲೂಕಿನ ಕೋಗನೊಳ್ಳಿ ಚೆಕ್ ಪೋಸ್ಟ್ ತಪಾಸಣೆ ವೇಳೆ ದಾಖಲೆ ಇಲ್ಲದೆ ಅಕ್ರಮವಾಗಿ ಸಾಗಿಸುತ್ತಿದ್ದ 1.5 ಕೋಟಿ ಹಣ ಸೀಜ್ ಮಾಡಲಾಗಿದೆ. ಖಾಸಗಿ ಬಸನಲ್ಲಿ ಪ್ರಯಾಣಿಕನೋರ್ವನ ಬಳಿಯಿದ್ದ 1.5 ಕೋಟಿ ನಗದು ಹಣವನ್ನ ಸೀಜ್ ಮಾಡಲಾಗಿದೆ. ಅಂತೆಯೇ ದೇವನಹಳ್ಳಿಯಲ್ಲಿ 20 ಸಾವಿರ ಮೌಲ್ಯದ ಅಕ್ರಮ ಮದ್ಯವನ್ನ ವಶಕ್ಕೆ ಪಡೆದಿದ್ದಾರೆ. ನರಸಿಂಹಮೂರ್ತಿ ಎಂಬಾತ ಓಮಿನಿ ಕಾರಿನಲ್ಲಿ 20 ಸಾವಿರ ಮೌಲ್ಯದ ಅಕ್ರಮ ಮದ್ಯ ಸಾಗಿಸುತ್ತಿದ್ದ. ಈ ವೇಳೆ ಕಾರ್ಯಾಚರಣೆ ನಡೆಸಿದ ಅಬಕಾರಿ ಅಧಿಕಾರಿಗಳು ಅಕ್ರಮ ಮದ್ಯವನ್ನ ವಶಪಡಿಸಿಕೊಂಡಿದ್ದಾರೆ.