Webdunia - Bharat's app for daily news and videos

Install App

ಸತ್ತ ಮಗನ ಶವವನ್ನು ಈ ಬಡ ಅಪ್ಪ ಸಾಗಿಸಿದ ಪರಿ ಹೇಗೆ ಗೊತ್ತಾ?

Webdunia
ಮಂಗಳವಾರ, 2 ಮೇ 2017 (08:10 IST)
ಆನೇಕಲ್: ಬಡತನ ಮತ್ತು ತಿಳುವಳಿಕೆಯ ಕೊರತೆಯಿದ್ದರೆ ಏನಾಗುತ್ತದೆ ಎಂಬುದಕ್ಕೆ ಈ ಘಟನೆ ಸಾಕ್ಷಿ. ವ್ಯಕ್ತಿಯೊಬ್ಬ ತನ್ನ ಮಗನ ಶವವನ್ನು ಸಾಗಿಸಿದ ಪರಿ ಕರುಣಾಜನಕವಾಗಿದೆ.

 
ಎಲ್ಲರೂ ಮೃತದೇಹವನ್ನು ಆಂಬ್ಯುಲೆನ್ಸ್ ನಲ್ಲಿಕೊಂಡೊಯ್ದರೆ ಈತ ದ್ವಿಚಕ್ರ ವಾಹನದಲ್ಲಿ ಸಾಗಿಸಿದ್ದಾನೆ. ಇವರ ಕರುಣಾಜನಕ ಕತೆಗೆ ಕೊನೆಗೂ ಪೊಲೀಸರ ಕಣ್ತೆರೆಸಿದೆ.

ಸಫಾನ್ ರಾಯ್ ಎಂಬಾತ ಮೂಲತಃ ಒಡಿಶಾ ನಿವಾಸಿ. ಕೆಲಸಕ್ಕಾಗಿ ಕರ್ನಾಟಕಕ್ಕೆ ವಲಸೆ ಬಂದಿದ್ದ. ಈತನ ಮೂರು ವರ್ಷದ ಪುತ್ರ  ಅಪಘಾತಕ್ಕೀಡಾಗಿ ಗಂಭೀರ ಗಾಯಗೊಂಡು ಆನೇಕಲ್ ಆಸ್ಪತ್ರೆಗೆ ದಾಖಲಾಗಿದ್ದ.

ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದ. ಆದರೆ ಮೃತದೇಹವನ್ನು ಸಾಗಿಸಲು ಉಚಿತ ಆಂಬ್ಯುಲೆನ್ಸ್ ಸೇವೆ ಇದೆ ಎಂಬ ಮಾಹಿತಿ ಸಫಾನ್ ಗಿರಲಿಲ್ಲ. ಭಾಷೆ ಬರದ ಕಾರಣ ಆತನಿಗೆ ಸಂವಹನ ಸಮಸ್ಯೆಯಾಗಿತ್ತು.

ಆಸ್ಪತ್ರೆಯವರೂ ಮಾಹಿತಿ ನೀಡದೇ ಇದ್ದುದರಿಂದ ದ್ವಿಚಕ್ರ ವಾಹನದಲ್ಲೇ ಮಗನ ಶವ ಸಾಗಿಸಿದರು. ಇದನ್ನು ಕೆಲವು ಸ್ಥಳೀಯ ಚಾನೆಲ್ ಗಳು ಪ್ರಸಾರ ಮಾಡಿದ್ದವು. ಇದರಿಂದ ಪೊಲೀಸರಿಗೆ ಮಾಹಿತಿ ದೊರೆತು ಪ್ರಕರಣ ದಾಖಲಿಸಿದರಲ್ಲದೆ, ದೇಹವನ್ನು ಮರಳಿ ಆಸ್ಪತ್ರೆಗೆ ಕರೆತಂದು ಪೋಸ್ಟ್ ಮಾರ್ಟಂ ಮಾಡಿಸಿದರು. ನಂತರ ಆಂಬ್ಯುಲೆನ್ಸ್ ನಲ್ಲೇ ಮೃತದೇಹ ಸಾಗಿಸಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments