ದುಬೈನಿಂದ ಬೆಂಗಳೂರಿಗೆ ವಾಪಸ್ಸಾದ ಸಿಎಂ ಸಿದ್ದರಾಮಯ್ಯ ಫುಲ್ ರಿಲ್ಯಾಕ್ಸ್ ಮೂಡ್`ನಲ್ಲಿದ್ದರು. ಮಗ ಮತ್ತು ಕುಟುಂಬ ಸಮೇತ ತೆರಳಿ ಒರಾಯನ್ ಮಾಲ್`ನಲ್ಲಿ ಸಿಎಂ ಬಾಹುಬಲಿ-2 ಚಿತ್ರ ವೀಕ್ಷಿಸಿದರು. ಈ ಹಿಂದೆ ಸಿಎಂ ರಾಜಕುಮಾರ ಚಿತ್ರವನ್ನೂ ಮಾಲ್`ನಲ್ಲಿ ವೀಕ್ಷಿಸಿದ್ದರು.
ಆದರೆ, ಸಿಎಂ ಸಿನಿಮಾ ವೀಕ್ಷಿಸಿದ ವಿಷಯ ಇದೀಗ ಭಾರೀ ವಿವಾದ ಸೃಷ್ಟಿಸಿದೆ. 48 ಟಿಕೆಟ್ ಖರಿದಿಸಿದ್ದ ಸಿದ್ದರಾಮಯ್ಯ ಪ್ರತೀ ಟಿಕೆಟ್`ಗೆ ಬರೋಬ್ಬರಿ 1050 ರೂ. ಪಾವತಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಮಾಲ್`ಗಳಲ್ಲಿ 200 ರೂ.ಗಿಂತಲೂ ಅಧಿಕ ಬೆಲೆಯ ಟಿಕೆಟ್ ಮಾರುವಂತಿಲ್ಲ ಎಂದು ಬಜೆಟ್`ನಲ್ಲಿ ಘೋಷಿಸಿದ್ದ ಸಿಎಂ ಸಿದ್ದರಾಮಯ್ಯ, ಿತ್ತೀಚೆಗೆ ಆದೇಶ ಪ್ರತಿಗೂ ಸಹಿ ಹಾಕಿದ್ದರು. ಮಾಲ್`ಗಳಲ್ಲಿ ಟಿಕೆಟ್`ಗೆ 200 ರೂ. ಮಿತಿ ಆದೇಶ ಮಾಡಿ ತಾವೇ 1050 ರೂ. ಕೊಟ್ಟು ಟಿಕೆಟ್ ಖರೀದಿಸಿದ್ದು ಎಷ್ಟು ಸರಿ ಎಂಬ ಪ್ರಶ್ನೆ ಎದ್ದಿದೆ. ಸರ್ಕಾರದ ನಿಯಮವನ್ನ ಸ್ವತಃ ಸಿಎಂ ಮುದರೇ? ಎಂಬ ಪ್ರಶ್ನೆ ಎದ್ದಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ