Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಸೆಲ್ಫಿ ತೆಗೆಯುವ ಮೊದಲು ಒಮ್ಮೆ ಇಲ್ಲಿ ನೋಡಿ

ಸೆಲ್ಫಿ ತೆಗೆಯುವ ಮೊದಲು ಒಮ್ಮೆ ಇಲ್ಲಿ ನೋಡಿ
ಬೆಂಗಳೂರು , ಬುಧವಾರ, 20 ಡಿಸೆಂಬರ್ 2017 (15:25 IST)
ಬೆಂಗಳೂರು: ಅಪಾಯಕಾರಿ ಸ್ಥಳಗಳಲ್ಲಿ ನಿಂತು "ಸೆಲ್ಫಿ' ಕ್ಲಿಕ್ಕಿಸುವುದೆಂದರೆ ಈಗಿನ ಯುವ ಜನಾಂಗಕ್ಕೆ ಸಖತ್ ಕ್ರೇಜ್. ಆದರೆ ಇನ್ನು ಮುಂದೆ ಈ ರೀತಿ ಸಾಹಸಗಳನ್ನು ಮಾಡಿದರೆ, ಅದರಿಂದಾಗುವ ಸಾವು-ನೋವು ಪ್ರಕರಣಗಳಿಗೆ ವಿಮಾ ಕಂಪನಿಗಳು ಪರಿಹಾರ ನೀಡದಿರಲು ಚಿಂತನೆ ನಡೆಸಿವೆಯಂತೆ.


ರೈಲ್ವೆ ಹಳಿ, ಜಲಪಾತ, ಬೆಟ್ಟದ ತುದಿ, ಕಟ್ಟಡದ ತುದಿ ಹೀಗೆ ಅಪಾಯಕಾರಿ ಸ್ಥಳಗಳಲ್ಲಿ ಸೆಲ್ಫಿ ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣಗಳಿಗೆ ಹರಿಬಿಟ್ಟು ಲೈಕ್ಸ್, ಕಮೆಂಟ್ಸ್ ಗಿಟ್ಟಿಸಿಕೊಳ್ಳುವ ಉಮೇದು ಈಗಿನವರಿಗೆ ಹೆಚ್ಚು. ಇದರಿಂದ ಸಾಕಷ್ಟು ಸಾವು-ನೋವುಗಳು ಸಂಭವಿಸಿವೆ. ಈ ಹಿನ್ನೆಲೆಯಲ್ಲಿ ಇಂತಹ ಗೀಳಿಗೆ ಪ್ರೋತ್ಸಾಹ ನೀಡದಿರಲು ಬಹುತೇಕ ವಿಮಾ ಕಂಪನಿಗಳು ಮುಂದಾಗಿವೆ. ಇಂತಹ ಅಪಘಾತಗಳಲ್ಲಿ ಗಾಯಗೊಂಡವರು ಅಥವಾ ಸಾವನ್ನಪ್ಪಿದ ಕುಟುಂಬಗಳಿಗೆ ಪರಿಹಾರ ನೀಡದಿರಲು ವಿಮಾ ಕಂಪನಿಗಳು ಚಿಂತನೆ ನಡೆಸಿವೆ.


ದಿ ಕಸ್ಟಮರ್‌ ಕೇರ್‌ ಆಫ್ ಟಾಟಾ ಎಐಜಿ ಜನರಲ್‌ ಇನ್ಷೊರನ್ಸ್‌ ಕಂಪೆನಿ, ಸೆಲ್ಫಿ ತೆಗೆದುಕೊಳ್ಳುವ ಸಂದರ್ಭದಲ್ಲಿ ಸಂಭವಿಸುವ ಸಾವುಗಳು ಅಪಘಾತ ಎಂದು  ಪರಿಗಣಿಸಲಾಗುವುದಿಲ್ಲ. ಅಪಘಾತದಲ್ಲಿ ಸಾವುಗಳು ಸಂಭವಿಸಿದರೆ, ಸಮಗ್ರವಾಗಿ  ತನಿಖೆ ನಡೆಸಿ, ನಂತರ ಸಂತ್ರಸ್ತ ಕುಟುಂಬಕ್ಕೆ ಪರಿಹಾರ ಮೊತ್ತ ಬಿಡುಗಡೆ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ


Share this Story:

Follow Webdunia kannada

ಮುಂದಿನ ಸುದ್ದಿ

ಜಿಯೋದಿಂದ ಟ್ರಿಬಲ್ ಕ್ಯಾಶ್‌ಬ್ಯಾಕ್ ಆಫರ್