ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟಿಸಿದರು
ಈ ವರ್ಷ ಪರೀಕ್ಷೆಗೆ 3, 35.138 ಬಾಲಕರು ಮತ್ತು 3.31.359 ಬಾಲಕಿಯರು ಸೇರಿದಂತೆ ಒಟ್ಟು 6, ಲಕ್ಷದ 66 ಸಾವಿರದ 497 ವಿದ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಡಿಸ್ಟಿಕ್ಷನ್ ಮತ್ತು ಮೊದಲ ದರ್ಜೆಯಲ್ಲಿ 1 ಲಕ್ಷದ 95 ಸಾವಿರದ 650 ವಿದ್ಯಾರ್ಥಿಗಳು ಪಾಸಾಗಿದ್ದರೆ, ಎರಡನೇ ದರ್ಜೆಯಲ್ಲಿ 1 ಲಕ್ಷದ 47 ಸಾವಿರದ 55 ಹಾಗೂ 68 ಸಾವಿರದ 721 ವಿದ್ಯಾರ್ಥಿಗಳು ಜಸ್ಟ್ ಪಾಸ್ ಆಗಿದ್ದಾರೆ.
600 ಕ್ಕೆ 600 ಅಂಕಗಳನ್ನು ಗಳಿಸಿದ 5 ಜಿಲ್ಲೆಗಳು ಮೊದಲ ಸ್ಥಾನ ಪಡೆದಿದ್ದು, ದಕ್ಷಿಣ ಕನ್ನಡ 445, ಬೆಂಗಳೂರು ದಕ್ಷಿಣ 302, ಬೆಂಗಳೂರು ಉತ್ತರ 261, ಉಡುಪಿ 149, ಹಾಸನ 104 ಶಾಲೆಗಳು ಶೇ.100ರಷ್ಟು ಫಲಿತಾಂಶ ಪಡೆದಿವೆ.