Select Your Language

Notifications

webdunia
webdunia
webdunia
webdunia

ಸೋಮವಾರದಿಂದ ಶಾಲೆ ಒಪೆನ್ - ಶಿಕ್ಷಣ ಸಚಿವರು

ಸೋಮವಾರದಿಂದ ಶಾಲೆ ಒಪೆನ್ - ಶಿಕ್ಷಣ ಸಚಿವರು
ಬೆಂಗಳೂರು , ಗುರುವಾರ, 10 ಫೆಬ್ರವರಿ 2022 (15:32 IST)
ಹಿಜಾಬ್ ಮತ್ತು ಕೇಸರಿ ಶಾಲು ನಡುವಿನ ಸಂಘರ್ಷ ಹೆಚ್ಚಾದ ಹಿನ್ನೆಲೆ ಸರ್ಕಾರ ಶಾಲಾ-ಕಾಲೇಜುಗಳಿಗೆ ಮೂರು ದಿನ ರಜೆ ಘೋಷಿಸಿತ್ತು. ಈ ಸಂಬಂಧ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ.
 
ಈ ಬಗ್ಗೆ ಇದುವರೆಗೂ ಸರ್ಕಾರ ತೀರ್ಮಾನ ತೆಗೆದುಕೊಂಡಿಲ್ಲ.
ನಾಳೆಗೆ ಸರ್ಕಾರ ಆದೇಶ ಮಾಡಿದ ರಜೆ ಮುಗಿಯುತ್ತದೆ. ಕೊರೊನಾ ಮೂರನೇ ಅಲೆಯಲ್ಲೇ ನಾವು ಶಾಲೆ ಓಪನ್ ಮಾಡಿದ್ದೀವಿ. ಈಗ ಕಿಡಿಗೇಡಿಗಳ ಕೃತ್ಯದಿಂದ ಕಾಲೇಜು ಬಂದ್ ಮಾಡುವ ಅನಿವಾರ್ಯ ಆಗಿದೆ. ಶನಿವಾರ, ಭಾನುವಾರ ರಜೆ ಇದೆ, ಸೋಮವಾರ ಬಹುತೇಕ ಶಾಲೆ ಓಪನ್ ಆಗಲಿದೆ ಎಂದರು.
 
ಮಕ್ಕಳ ಮನಸ್ಸು ಕೆಡಬಾರದು, ಮಕ್ಕಳ ನಡುವೆ ವೈಮನಸ್ಸು ಆಗಬಾರದು. ಕೋರ್ಟ್ ತೀರ್ಪು ಬರುವವವರೆಗೆ ಹಿಜಾಬ್ ಬದಿಗಿಟ್ಟು ಕಾಲೇಜು ಬನ್ನಿ. ಶಿಕ್ಷಣ ಸಂಸ್ಥೆಗಳು ಧಾರ್ಮಿಕ ಆಚರಣೆಗಳ ಕೇಂದ್ರಗಳಲ್ಲ ಎಂದು ಮುಸ್ಲಿಂ ಯುವತಿಯರಲ್ಲಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ‌ಮನವಿ ಮಾಡಿಕೊಂಡರು.

Share this Story:

Follow Webdunia kannada

ಮುಂದಿನ ಸುದ್ದಿ

ವಿಧಾನಸೌಧ ಸುತ್ತ ನಿಷೇಧಾಜ್ಞೆ