ಹಿಜಾಬ್ ಸಂಬಂಧ ಹೈಕೋರ್ಟ್ ಮಧ್ಯಂತರ ತೀರ್ಪು ನೀಡಿದರೂ ಶಾಲೆಗಳಲ್ಲಿ ಹಿಜಾಬ್ ಗಲಾಟೆ ವ್ಯಾಪಿಸಿದೆ. ಅದ ರಂತೆ ಚಂದ್ರಲೇಔಟ್ ನಲ್ಲಿರುವ ವಿದ್ಯಾಸಾಗರ್ ಶಾಲೆಯಲ್ಲಿ ಬೆಳಗ್ಗೆ ಹಿಜಾಬ್ ಗಲಾಟೆ ನಡೆಡಿದ್ದು, ಈ ವಿಚಾರವಾಗಿ ಪಾಲಕರು ಮತ್ತು ಶಾಲಾ ಆಡಳಿತ ಮಂಡಳಿ ವಿರುದ್ಧ ಮಾತಿನ ಚಕಮಕಿ ನಡೆದಿದೆ.
ಪೊಲೀಸರು ಶಾಲೆಗೆ ಭೇಟಿ ನೀಡಿ ಪರಿಸ್ಥಿತಿ ನಿಯಂತ್ರಿಸಲು ಮುಂದಾ ದರು. ಶಾಲಾ ಶಿಕ್ಷಕಿ ಒಬ್ಬರು ತರಗತಿ ಬೋರ್ಡ್ ಮೇಲೆ KLS ಎಂದು ಬರೆದು ನೀವೇ ಅರ್ಥ ಮಾಡಿಕೊಳ್ಳುವಂತೆ ಸೂಚನೆ ನೀಡಿದ್ದಾರೆ ಮತ್ತು 7ನೇ ತರಗತಿ ವಿದ್ಯಾರ್ಥಿಗೆ ಹಿಜಾಬ್ ತೆಗೆಯುವಂತೆ ಶಾಲೆಯಲ್ಲಿ ಶಿಕ್ಷಕಿ ಸೂಚನೆ ನೀಡಿದ್ದಾರೆ. ಈ ವಿಚಾರವಾಗಿ ಗಲಾಟೆ ನಡೆ ದಿದೆ ಎನ್ನಲಾಗಿದೆ. ಆ ಶಾಲಾ ಶಿಕ್ಷಕಿಯನ್ನು ಶಾಲಾ ಆಡಳಿತ ಮಂಡಳಿ ಸಸ್ಪೆಂಡ್ ಮಾಡಿದೆ. ಪರಿಸ್ಥಿತಿ ಮಿತಿ ಮಿರುತ್ತಿದ್ದನಂತೆ ಬೆಂಗ ಳೂರು ದಕ್ಷಿಣ ಜಿಲ್ಲಾ ಉಪನಿರ್ದೇಶಕ ರಾಜೇಂದ್ರ ಶಾಲೆಗೆ ಭೇಟಿ ನೀಡಿ ಪಾಲಕರು ಮತ್ತು ಆಡಳಿತ ಮಂಡಳಿಯಿಂದ ಮಾಹಿತಿ ಪಡೆದಿ ದ್ದಾರೆ ಎಂದು ತಿಳಿದು ಬಂದಿದೆ.