Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ದಸರಾ ಹಬ್ಬ ಮುಗಿದ ತಕ್ಷಣ ರಾಜ್ಯದಲ್ಲಿ ಪ್ರಾಥಮಿಕ ಅಂದ್ರೆ 1 ರಿಂದ 5ನೇ ತರಗತಿ(1st to 5th Class)ಗಳನ್ನ ಆರಂಭಿಸಲಾಗುವುದು ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್
ಹೇಳಿದ್ದಾರೆ.
ಉಡುಪಿಯಲ್ಲಿ ಈ ಕುರಿತು ಮಾತನಾಡಿದ ಸಚಿವರು, 'ಹಲವು ಜಿಲ್ಲೆಗಳಲ್ಲಿ ಕೋವಿಡ್ ಪಾಸಿಟಿವಿಟಿ ದರ ಶೂನ್ಯವಿದೆ.
ಶಾಲೆ ಆರಂಭಿಸಬಹುದೆಂದು ತಜ್ಞರು ಅಭಿಪ್ರಾಯ ನೀಡಿದ್ದಾರೆ. ಮುಖ್ಯಮಂತ್ರಿಗಳು ಕೂಡ ಶಾಲೆಗಳ ಆರಂಭಕ್ಕೆ ಆಸಕ್ತಿ ತೋರಿದ್ದಾರೆ. ಹಾಗಾಗಿ ದಸರಾ ಮುಗಿದ ತಕ್ಷಣ ಶಾಲೆಗಳು ಆರಂಭ ಮಾಡುತ್ತೇವೆ' ಎಂದರು.
ಇನ್ನು 'ಈಗಿರುವಂತೆ ಆಗಲೂ ಶಾಲೆಗಳಲ್ಲಿ ಕಡ್ಡಾಯ ಹಾಜರಾತಿ ಇರುವುದಿಲ್ಲ. ಆನ್ಲೈನ್ ಮತ್ತು ಆಫ್ಲೈನ್ ಎರಡು ಕ್ಲಾಸ್ಗಳು ನಡೆಯುತ್ವೆ. ಇಚ್ಛೆಯಿದ್ದವರು ತರಗತಿಗಳಿಗೆ ಹಾಜರಾಗಬಹುದು ಎಂದರು. ಇನ್ನು ಇದೇ ವೇಳೆ ಸಧ್ಯ ಗ್ರಾಮೀಣ ಭಾಗದಲ್ಲಿ ಹೈಸ್ಕೂಲ್ ಹಾಜರಾತಿ ಶೇ.90ರಷ್ಟಿದೆ' ಎಂದರು.