Select Your Language

Notifications

webdunia
webdunia
webdunia
webdunia

ಭಾರಿ ಮಳೆ ಶಾಲಾ ಕಾಲೇಜು ರಜೆ

Crime
ಮಳೆಯಿಂದಾಗಿ ನಗರದ ರಸ್ತೆಗಳ ಮೇಲೆ ನೀರು ನಿಂತಿದೆ. ನೀರು ಕಡಿಮೆಯಾಗದ ಹಿನ್ನೆಲೆಯಲ್ಲಿ ರಸ್ತೆಗಳ ಮೇಲೆ ಸಂಚಾರ ದುಸ್ತರವಾಗಿದೆ. ಇಂದೂ ಮಳೆಯಾಗಬಹುದು ಎಂಬ ಮುನ್ಸೂಚನೆ ಇರುವ ಹಿನ್ನೆಲೆಯಲ್ಲಿ ನಗರದ ಮಹದೇವಪುರ, ಬೊಮ್ಮ ನಹಳ್ಳಿ, ಕೃಷ್ಣರಾಜಪುರ (ಕೆಆರ್ ಪುರಂ) ಮತ್ತು ಮಂಡೂರು ವ್ಯಾಪ್ತಿಯ ಎಲ್ಲ ಸರ್ಕಾರಿ, ಅನುದಾನಿತ ಶಾಲಾ-ಕಾಲೇಜುಗಳಿಗೆ ಶಿಕ್ಷಣ ಇಲಾಖೆ ರಜೆ ಘೋಷಿಸಿದೆ
ಮಾರತ್ತಹಳ್ಳಿ-ಸರ್ಜಾಪುರ ರಿಂಗ್​ರೋಡ್ ಜಲಾವೃತಗೊಂಡಿರುವ ಹಿನ್ನೆಲೆಯಲ್ಲಿ ಇಂದು ರಿಂಗ್​ರೋಡ್​ನಲ್ಲಿ ಲಘು ವಾಹನಗಳಿಗೆ ನಿಷೇಧ ವಿಧಿಸಲಾಗಿದೆ. ಬೆಂಗಳೂರಿನ ಔಟರ್​ ರಿಂಗ್​​ ರೋಡ್​ನಲ್ಲಿ ಸಿಲುಕಿದ್ದ ಬೆಂಜ್ ಕಾರ್​ನಲ್ಲಿ ಮೂವರು ಹೊರಬರಲು ಪರದಾ ಡಿದರು. ಸಹಾಯ ಮಾಡುವಂತೆ ಸವಾರರು ಕೂಗುತ್ತಿರುವ ಘಟನೆ ಮಾರತ್ತಹಳ್ಳಿಯ ಔಟರ್​ ರಿಂಗ್​ ರೋಡ್​​ನಲ್ಲಿ ನಡೆದಿದೆ. ಮಳೆಯಿಂ ದಾಗಿ ಸರ್ಜಾಪುರ, ಬೆಳ್ಳಂದೂರು ಮಾರತಹಳ್ಳಿ, ಔಟರ್ ರಿಂಗ್​ರೋಡ್​ಗಳಲ್ಲಿ ನೀರು ನಿಂತಿದೆ. ವಾಹನಗಳು ನಿಧಾನಗತಿಯಲ್ಲಿ ಸಾಗುತ್ತಿದ್ದು, ಇಂದೂ ಸಹ ಟ್ರಾಫಿಕ್ ಜಾಮ್ ಆಗಬಹುದು ಎಂದು ಮುನ್ನೆಚ್ಚರಿಕೆ ನೀಡಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಿದ್ರೆ ಬರುತ್ತಿಲ್ಲ ಎಂದು 19ರ ನರ್ಸಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ!