Publish Date: Sat, 12 Nov 2022 (15:04 IST)
Updated Date: Sat, 12 Nov 2022 (15:06 IST)
ಬೆಂಗಳೂರಿನಲ್ಲಿ ಶಾಲಾ ಬಾಲಕ ಆತ್ಮಹತ್ಯೆ ಮಾಡಿಕೊಂಡಿದ್ದು,ಸಾಯಿ ಕುಮಾರ್ (13) ಎಂಬ ಬಾಲಕ ಆತ್ಮಹತ್ಯೆ ಮಾಡಿಕೊಂಡವರಾಗಿದ್ದು,7 ನೇ ತರಗತಿ ವಿದ್ಯಾರ್ಥಿ ವ್ಯಾಸಾಂಗ ಮಾಡುತ್ತಿದ್ದರು.ಮನೆ ಕೆಲಸ ಮಾಡುವ ವಿಚಾರಕ್ಕೆ ಕೋಪಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಪೋಷಕರು ಬೈದರು ಎಂಬ ಕ್ಷುಲಕ ಕಾರಣಕ್ಕೆ ಬಾಲಕ ಆತ್ಮಹತ್ಯೆ ಮಾಡಿಕೊಂಡಿದ್ದು,ಮನೆ ಟೆರಸ್ ಮೇಲೆ ಕತ್ತಿಗೆ ಹಗ್ಗ ಕಟ್ಟಿಕೊಂಡು ಸೂಸೈಡ್ ಮಾಡಿಕೊಂಡಿದ್ದಾನೆ.ಘಟನೆ ಹೆಬ್ಬಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.