ಸಾವರ್ಕರ್ ಪೋಸ್ಟರ್ ಅನ್ನು ಕಿಡಿಗೇಡಿಗಳು ಬ್ಲೇಡ್ನಿಂದ ಹರಿದು ಹಾಕಿ ವಿಕೃತಿ ಮೆರೆದ ಘಟನೆ ದಾವಣಗೆರೆಯಲ್ಲಿ ನಡೆದಿದೆ. ನಗರದಾದ್ಯಂತ ಗಣಪತಿ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಹೊನ್ನಾಳಿ ಪಟ್ಟಣ ಹಾಗೂ ಗೊಲ್ಲರಹಳ್ಳಿಯಿಂದ ಹೊನ್ನಾಳಿ ಮಾರ್ಗವಾಗಿ ಈ ಫ್ಲೆಕ್ಸ್ಗಳನ್ನು ಹಾಕಲಾಗಿತ್ತು. ಫ್ಲೆಕ್ಸ್ಗಳಲ್ಲಿ ವೀರ ಸಾವರ್ಕರ್ ಹಾಗೂ ಶಾಸಕ ರೇಣುಕಾಚಾರ್ಯ ಅವರ ಭಾವಚಿತ್ರಗಳನ್ನ ಬ್ಲೇಡ್ನಿಂದ ಹರಿದು ಹಾಕಿದ್ದಾರೆ. ಇದೀಗ ಈ ರೀತಿ ವಿಕೃತಿ ಮೆರೆದ ದುಷ್ಕರ್ಮಿಗಳನ್ನು ಶೀಘ್ರವೇ ಬಂಧಿಸುವಂತೆ ಬಿಜೆಪಿ ಕಾರ್ಯಕರ್ತರು ಒತ್ತಾಯಿಸಿದ್ದಾರೆ. ಹೊನ್ನಾಳಿ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.