Publish Date: Sun, 06 Feb 2022 (20:06 IST)
Updated Date: Sun, 06 Feb 2022 (20:09 IST)
ಇಂದು ಬೆಳ್ಳಂಬೆಳಗ್ಗೆ ಸಾರಕ್ಕಿ ಮಾರ್ಕೆಟ್ ವ್ಯಾಪಾರಸ್ಥರಿಗೆ ಬಿಬಿಎಂಪಿ ಅಧಿಕಾರಿಗಳು ಶಾಕ್ ನೀಡಿದ್ದರು. ಬನಶಂಕರಿಯ ಸಾರಕ್ಕಿ ಮಾರ್ಕೆಟ್ ನ ಫುಟ್ ಪಾತ್ ನಲ್ಲಿ ಇರುವ ಅಂಗಡಿಗಳಿಂದ ಪಾದಚಾರಿಗಳಿಗೆ ಪುತ್ಪಾಟ್ ಇಲ್ಲದಂತಾಗಿದ್ದು.. ಪ್ರತಿನಿತ್ಯ ಈ ಅಂಗಡಿಗಳಿಂದ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಗಿ ವಾಹನ ಸವಾರರು ಕಿರಿಕಿರಿ ಅನುಭವಿಸುವಂತಾಗಿದೆ.. ಈ ಹಿಂದೆಯೇ ವಾರ್ನಿಂಗ್ ಮಾಡಿದರು ವ್ಯಾಪಾರಸ್ಥರು ಕ್ಯಾರೇ ಅನ್ನದ ಕಾರಣ, ಇದ್ದಕಿದ್ದ ಹಾಗೆ ಇಂದು ಬೆಳೆಗೆ ಪುತ್ಪಾಟ್ ನಲ್ಲಿ ಇರುವ ಅಂಗಡಿಗಳನ್ನೂ ಬಿಬಿಎಂಪಿ ಅಧಿಕಾರಿಗಳು, ಟ್ರಾಫಿಕ್ ಪೊಲೀಸರು ಹಾಗೂ ಮಾರ್ಷಲ್ಗಳ ನೇತೃತ್ವದಲ್ಲಿ ಅಲ್ಲಿರುವ ವ್ಯಾಪಾರಿಗಳ ಅಂಗಡಿ ಗಳನ್ನು ತೆರವು ಮಾಡಿದ್ದಾರೆ. ಆದರೆ ವ್ಯಾಪಾರಸ್ಥರು ಇದರಿಂದ ಆಕ್ರೋಶಗೊಂಡು ಹೇಳದೆ ಕೇಳದೆ ಅಂಗಡಿಗಳನ್ನು ತೆರವು ಮಾಡಿದ್ದಾರೆ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ
geetha
Publish Date: Sun, 06 Feb 2022 (20:06 IST)
Updated Date: Sun, 06 Feb 2022 (20:09 IST)