Publish Date: Sat, 22 Jun 2019 (10:45 IST)
Updated Date: Sat, 22 Jun 2019 (10:47 IST)
ಬೆಂಗಳೂರು : ಸಿಎಂ ಕುಮಾರಸ್ವಾಮಿ ಗ್ರಾಮವಾಸ್ತವ್ಯದ ಕುರಿತು ಟೀಕೆ ಮಾಡಿದ ಬಿಜೆಪಿಗೆ ಸಚಿವ ಸಾ.ರಾ.ಮಹೇಶ್ ತಿರುಗೇಟು ನೀಡಿದ್ದಾರೆ.
ಬಿಜೆಪಿ ಜೊತೆ ಸೇರಿ ಸರ್ಕಾರ ಮಾಡಿದಾಗ ಗ್ರಾಮ ವಾಸ್ತವ್ಯ ಚೆನ್ನಾಗಿತ್ತು. ಆದರೆ ಕಾಂಗ್ರೆಸ್ ಜೊತೆ ಸೇರಿಕೊಂಡು ಮಾಡಿದ್ರೆ ಇದು ಗಿಮಿಕ್ ಆಗುತ್ತಾ? ಹಳ್ಳಿ ಕಡೆ ಬಂದ್ರೆ ವಿಧಾನಸೌಧದಲ್ಲಿ ಕುಳಿತು ಕೆಲಸ ಮಾಡಿ ಅಂತಾರೆ. ಯಡಿಯೂರಪ್ಪವನರೇ... ಈ ದ್ವಂದ್ವ ನಿಲುವು ಯಾಕೆ ? ಎಂದು ಪ್ರಶ್ನಿಸುವುದರ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗ್ರಾಮ ವಾಸ್ತವ್ಯದಿಂದ ಚಿಕ್ಕ ಹಳ್ಳಿಗಳ ಸಮಸ್ಯೆ ನಮ್ಮ ಕಣ್ಣನ್ನು ತೆರೆಸಿದೆ. ಹೀಗಾಗಿ, ಈ ಸಮಸ್ಯೆ ನಿವಾರಣೆಗೆ ಸರ್ಕಾರದ ಕ್ರಮ ವಹಿಸಲಿದೆ. ವಿಧಾನಸೌಧದಲ್ಲಿ ಎಷ್ಟೋ ಜನರಿಗೆ ಸಿಎಂ ಭೇಟಿಗೆ ಅವಕಾಶ ಇರುವುದಿಲ್ಲ. ಆದರೆ, ಇಡೀ ಸರ್ಕಾರ ಇಲ್ಲಿಗೆ ಬಂದಿದ್ದರಿಂದ ಜನರ ಸಮಸ್ಯೆಗಳು ನಿವಾರಣೆ ಆಗಲಿದೆ. ಸರ್ಕಾರದ ಆಡಳಿತ ಕೂಡ ಚುರುಕಾಗಲಿದೆ. ಅಧಿಕಾರಿಗಳು ಎಚ್ಚೆತ್ತುಕೊಂಡು ಕೆಲಸ ಮಾಡುತ್ತಾರೆ ಎಂದು ಸಾ.ರಾ. ಮಹೇಶ್ ಸಿಎಂ ವಾಸ್ತವ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.