Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಬೆಂಗಳೂರು : ಇವಿಎಂ ದುರಪಯೋಗ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಬೆಂಗಳೂರಿನಲ್ಲಿ ಸೋಮವಾರ (ಇಂದು) ಮುಖ್ಯ ಚುನಾವಣಾಧಿಕಾರಿ ಸಂಜೀವಕುಮಾರ್ ಅವರು ಸ್ಪಷ್ಟನೆ ನೀಡಿದ್ದಾರೆ.
‘ಇವಿಎಂ ಬಳಕೆಯಿಂದ ಪಾರದರ್ಶಕ ಫಲಿತಾಂಶ ಬಂದಿದೆ. ಇವಿಎಂ ಹ್ಯಾಕ್ ಮಾಡಲು ಸಾಧ್ಯವಿಲ್ಲ, ಚಿಪ್ ಒಮ್ಮೆ ಮಾತ್ರ ಬಳಸಲು ಸಾಧ್ಯ. ಇವಿಎಂ ಸೇಫ್ ಅಲ್ಲವೆಂಬ ಅನುಮಾನ ಪರಿಹಾರಕ್ಕಾಗಿ ವಿವಿ ಪ್ಯಾಟ್ ಬಳಕೆ ಮಾಡಲಾಗಿದೆ. ಇವಿಎಂಗೆ ಇಂಟರ್ ನೆಟ್, ವೈಫೈ, ಬ್ಲೂಟೂತ್ ಕನೆಕ್ಷನ್ ಇಲ್ಲ. ರಿಮೋಟ್ ಬಳಸಿ ಹ್ಯಾಕ್ ಮಾಡಲಾಗಲ್ಲ. ಇವಿಎಂ ಬಿಚ್ಚಿ ಚಿಪ್ ಬದಲಿಸಲಾಗಲ್ಲ. ಮತ ಯಂತ್ರ ಸಂಪೂರ್ಣ ಬಿಗಿ ಭದ್ರತೆಯಲ್ಲಿ ಇರುತ್ತದೆ. ವಿವಿ ಪ್ಯಾಟ್ ನಲ್ಲಿ ತಪ್ಪು ಮತದಾನ ಕಂಡುಬಂದ್ರೆ ದೂರು ನೀಡಬಹುದು. ಸುಳ್ಳು ದೂರು ನೀಡಿದರೆ ಕಠಿಣ ಕ್ರಮ, 6 ತಿಂಗಳು ಶಿಕ್ಷೆ ನೀಡುವ ಅವಕಾಶವಿದೆ’ ಎಂದು ಬೆಂಗಳೂರಿನಲ್ಲಿ ಇಂದು ಮುಖ್ಯ ಚುನಾವಣಾಧಿಕಾರಿ ಸಂಜೀವಕುಮಾರ್ ಅವರು ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ