ಬೆಂಗಳೂರು : ರಾಯಣ್ಣನ ಪ್ರತಿಮೆ ಪ್ರತಿಷ್ಠಾಪನೆ ವಿವಾದಕ್ಕೆ ಸಂಬಂಧಿಸಿದಂತೆ ಸಂಗೊಳ್ಳಿ ರಾಯಣ್ಣ , ಶಿವಾಜಿ ದೇಶಭಕ್ತರು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಡಿಸಿ ಜೊತೆ ಚರ್ಚೆ ಮಾಡಿದ್ದೇನೆ . ಉಸ್ತುವಾರಿ ಸಚಿವರು ನಿನ್ನೆ ಸಭೆ ಮಾಡಿದ್ದಾರೆ. ಎಲ್ಲಾ ರೀತಿಯ ಬಂದೋಬಸ್ತ್ ಗೆ ಸೂಚನೆ ನೀಡಿದ್ದಾರೆ. ಸಂಗೊಳ್ಳಿ ರಾಯಣ್ಣ , ಶಿವಾಜಿ ದೇಶಭಕ್ತರು. ಶಾಂತಿ ಕಾಪಾಡಲು ಸಹಕಾರ ಕೊಡಬೇಕು ಎಂದು ಮನವಿ ಮಾಡಿದ್ದಾರೆ.