Publish Date: Sun, 05 Jan 2020 (11:41 IST)
Updated Date: Sun, 05 Jan 2020 (11:43 IST)
ಬೆಂಗಳೂರು : ಭಾರತದಲ್ಲಿ ಮುಸ್ಲಿಂಮರಿಗೆ ಎಲ್ಲ ಸ್ಥಾನಮಾನ , ಗೌರವ ಸಿಗ್ತಿದೆ. ರಾಷ್ಟ್ರಪತಿ, ಜಡ್ಜ್ ಸೇರಿ ಎಲ್ಲ ಸ್ಥಾನವನ್ನೂ ಭಾರತ ನೀಡಿದೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಹೇಳಿದ್ದಾರೆ.
ದೇಶದ ಬಹುಸಂಖ್ಯಾತರು ಸಿಎಎ ಜಾರಿ ಒಪ್ಪಿಕೊಂಡಿದ್ದಾರೆ. ಆದ್ರೆ ಕಾಂಗ್ರೆಸ್ ನವರು ಪಾಕಿಸ್ತಾನದ ಪರ ವಾದ ಮಾಡ್ತಾರೆ. ಕಾಂಗ್ರೆಸ್ ನವರಿಗೆ ಕೇಂದ್ರದ ಆಡಳಿತದಲ್ಲಿ ಲೋಪ ಕಂಡಿಲ್ಲ. ಹೀಗಾಗಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನ ವಿರೋಧಿಸ್ತಿದ್ದಾರೆ. ನಾವು ನಮ್ಮ ನಿಲುವನ್ನು ಹಿಂಪಡೆಯಲ್ಲ. ಜಾರಿ ಮಾಡ್ತೇವೆ ಎಂದು ಅವರು ತಿಳಿಸಿದ್ದಾರೆ.
ಮುಸ್ಲಿಂರ ತಲೆ ಹಾಳುಮಾಡುವವರ ಮೇಲೆ ನಿಗಾವಹಿಸಿ, ಮುಸ್ಲಿಂರನ್ನು ಅವರು ವೋಟ್ ಬ್ಯಾಂಕ್ ಮಾಡಿಕೊಂಡಿದ್ದಾರೆ. ಸಿಎಎ ಹೆಸರಿನಲ್ಲಿ ಎನ್.ಆರ್.ಸಿ ದುರುಪಯೋಗ ಎಂಬುದು ಸುಳ್ಳು. ಸುಮ್ಮನೆ ಜನರಲ್ಲಿ ಗೊಂದಲ ಸೃಷ್ಟಿಸುವ ಕೆಲಸ ನಡೀತಿದೆ. ಕಾಂಗ್ರೆಸ್ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಹೀಗೆ ಮಾಡುತ್ತಿದೆ ಎಂದು ಕಾಂಗ್ರೆಸ್ ವಿರುದ್ಧ ಅವರು ಕಿಡಿಕಾರಿದ್ದಾರೆ.