ಬೀದರ್ ನ ಬಸವ ಗಿರಿಯಲ್ಲಿ ಇಂದು ವಚನ ವಿಜಯೋತ್ಸವ ಸಮಾರಂಭ ಆಯೋಜಿಸಲಾಗಿದೆ. ಆದರೆ ವಚನ ವಿಜಯೋತ್ಸವಕ್ಕೆ ಬಸವ ಪೀಠದ ಪೀಠಾಧ್ಯಕ್ಷೆ ಮಾತೆ ಮಹಾದೇವಿಗೆ ಆಹ್ವಾನ ನೀಡದಿರುವುದು ಬಸವಭಕ್ತರ ಆಕ್ರೋಶಕ್ಕೆ ಕಾರಣವಾಗುತ್ತಿದೆ.
ಶ್ರೀ ಅಕ್ಕ ಅನ್ನಪೂರ್ಣ ತಾಯಿ ಹಾಗೂ ಶ್ರೀ ಡಾ.ಗಂಗಾಂಬಿಕೆ ಅಕ್ಕ ನೇತೃತ್ವದಲ್ಲಿ ವಿಜಯೋತ್ಸವ ನಡೆಯುತ್ತಿದೆ.
ಬಸವ ಪೀಠದ ಪೀಠಾಧ್ಯಕ್ಷೆ ಮಾತೆ ಮಹಾದೇವಿ ಹೆಸರಿಲ್ಲದ ಕಾರಣ ಸಾರ್ವಜನಿಕರಲ್ಲಿ ಗೊಂದಲ ಉಂಟಾಗಿದೆ. ಬಸವ ಪ್ರತಿಷ್ಠಾನದಿಂದ ನಡೆಯುತ್ತಿರುವ ವಚನ ವಿಜಯೋತ್ಸವದ ಆಹ್ವಾನ ಪತ್ರಿಕೆಯಲ್ಲಿ ಶರಣೆ ಮಾತೆ ಮಹದೇವಿಯವರ ಹೆಸರೇ ಇಲ್ಲದಿರುವುದು ಲಿಂಗಾಯತ ಶರಣೆಯರಲ್ಲೇ ಅಸಮಾನತೆಯ ಬಾವುಟ ಹಾರಿಸಿದಂತಾಗಿದೆ.
ವಚನ ವಿಜಯೋತ್ಸವದಲ್ಲಿ ಬಸವಣ್ಣನವರ ವಚನಗಳನ್ನ ಪಠಿಸಲಾಗುತ್ತದೆ. ಸಮಾನತೆ ತತ್ವ ಸಾರಿದ ಬಸವಣ್ಣನವರ ಕಾರ್ಯಕ್ರಮದಲ್ಲಿ ಅಸಮಾನತೆ ಮೆರೆಯಲಾಗುತ್ತಿದೆ. ಶಿಷ್ಠಾಚಾರಕ್ಕಾದರೂ ಆಹ್ವಾನ ಪತ್ರಿಕೆಯಲ್ಲಿ ಅವರ ಹೆಸರು ಹಾಕಬೇಕಿತ್ತು ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.
ಬಸವ ಪೀಠಕ್ಕೆ ಹೈಕಮಾಂಡ್ ನಂತಿರುವ ಮಾತೆ ಮಹಾದೇವಿ ಕಾರ್ಯಕ್ರಮಕ್ಕೆ ಆಹ್ವಾನ ನೀಡದೆ ಅವಮಾನ ಮಾಡಲಾಗಿದೆ ಎಂಬ ಆರೋಪ ಕೇಳಿಬರುತ್ತಿದೆ.