ಗ್ರಾಮೀಣ ಭಾಗ ರೀಮೋಟ್ ಏರಿಯಾಗಳು ಹಾಗೂ ಉತ್ತರ ಕರ್ನಾಟಕ ಭಾಗದಲ್ಲಿ ಲಸಿಕೆ ಕಡಿಮೆ ಪ್ರಮಾಣದಲ್ಲಿ ಆಗ್ತಿದೆ ಎಂದು ವೈದ್ಯ ದೇವಿಪ್ರಸಾದ್ ಶೆಟ್ಟಿ ಕಳವಳ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಬುಧವರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಗ್ರಾಮೀಣ ಪ್ರದೇಶಗಳಿಗೆ ನಮ್ಮ ವಾಹನ ಹಳ್ಳಿ ಭಾಗಗಳಿಗೆ ತೆರಳಿ ಲಸಿಕೆ ನೀಡಲಿದೆ. ದಿನನಿತ್ಯ ಒಂದರಿಂದ ಎರಡು ಸಾವಿರ ಲಸಿಕೆ ನೀಡುವ ಗುರಿ ಇದೆ ಎಂದರು.
ನನ್ನ ಅಭಿಪ್ರಾಯದ ಪ್ರಕಾರ ಮುಂದಿನ ಕೆಲ ವಾರಗಳಲ್ಲಿ ಬೇಕಾದಷ್ಟು ಲಸಿಕೆ ಸಿಗಲಿದೆ. ಇನ್ನೂ ದೇವರ ಬಳಿ ಮೂರನೇ ಅಲೆ ಬರಬಾರದು ಅಂತ ಪ್ರಾರ್ಥನೆ ಮಾಡಬೇಕು. ಬರ
ಲ್ಲ ಅಂತಾ ಹೇಳಿದರೆ ಎಲ್ಲರೂ ನಿರ್ಲಕ್ಷ್ಯ ಮಾಡುತ್ತಾರೆ. ಈಗಾಗಲೇ ಏನೇನು ಮಾಡಬೇಕು ಅಂತಾ ತಜ್ಞರ ಸಮಿತಿಯಿಂದ ಸಲಹೆ ಕೊಟ್ಟಿದ್ದೇವೆ ಎಂದು ಅವರು ವಿವರಿಸಿದರು.
ಹಂತ ಹಂತವಾಗಿ ಶಾಲೆ ಆರಂಭ ಮಾಡಬೇಕು ಅಂತಾ ಹೇಳಿದ್ದೇವೆ, ಅದನ್ನ ಸರ್ಕಾರ ಮಾಡುತ್ತಿದೆ. ಎಲ್ಲವನ್ನೂ ಚರ್ಚಿಸಿ ಚಿಕ್ಕಮಕ್ಕಳಿಗೆ ಯಾವಾಗ ಶಾಲೆ ಆರಂಭ ಮಾಡಬೇಕು ಎಂದು ಸರ್ಕಾರ ತೀರ್ಮಾನ ಮಾಡುತ್ತದೆ ಎಂದು ಅವರು ಸ್ಪಷ್ಟಪಡಿಸಿದರು.