ಬೆಂಗಳೂರು: ರಾಜ್ಯದ ಒಳನಾಡಿನಲ್ಲಿ ನೈರುತ್ಯ ಮುಂಗಾರು ಸಾಮಾನ್ಯವಾಗಿದ್ದು, ಕರಾವಳಿಯಲ್ಲಿ ದುರ್ಬಲವಾಗಿತ್ತು. ಬುಧವಾರ ಕರಾವಳಿ ಜಿಲ್ಲೆಗಳಲ್ಲಿ ಬಹುತೇಕ ಎಲ್ಲ ಸ್ಥಳಗಳಲ್ಲಿ ವ್ಯಾಪಕ ಮಳೆಯಾಗಿದ್ದು, ಒಳನಾಡಿನ ಕೆಲವು ಭಾಗಗಳಲ್ಲಿ ಮಾತ್ರ ಮಳೆಯಾಗಿದೆ.
ತೊಂಡೇಭಾವಿಯಲ್ಲಿ 13 ಸೆಂ.ಮೀ., ಚಿಕ್ಕಬಳ್ಳಾಪುರದಲ್ಲಿ 11 ಸೆಂ.
ಮಿ., ಕೋಲಾರದ ಮುಳಬಾಗಲಿನಲ್ಲಿ 10 ಸೆಂ.ಮೀ., ಚಿಕ್ಕಬಳ್ಳಾಪುರದ ಶಿಡ್ಲಘಟ್ಟದಲ್ಲಿ 8 ಸೆಂ.ಮೀ., ಗೌರಿಬಿದನೂರಿನಲ್ಲಿ 7 ಸೆಂ.ಮೀ., ಕೋಲಾರ ಜಿಲ್ಲೆ ರಾಯಲ್ಪಾಡುನಲ್ಲಿ 6 ಸೆಂ.ಮೀ., ಚಿಂತಾಮಣಿಯಲ್ಲಿ 5 ಸೆಂ.ಮೀ., ಬೀದರ್‌ನ ಜನವಾಡದಲ್ಲಿ 4 ಸೆಂ.ಮೀ., ಕೊಲ್ಲೂರು, ಭಾಲ್ಕಿ, ಮಹಾಗಾಂವ್, ಕಲಬುರ್ಗಿ, ದೇವನಹಳ್ಳಿ, ಚಿಂತಾಮಣಿ, ಹೆಸರಘಟ್ಟದಲ್ಲಿ ತಲಾ 3 ಸೆಂ.ಮೀ. ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಆ.26ರಿಂದ 29 ವರೆಗೆ ಕರಾವಳಿ ಜಿಲ್ಲೆಗಳ ಬಹುತೇಕ ಎಲ್ಲ ಸ್ಥಳಗಳು ಹಾಗೂ ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ವ್ಯಾಪಕ ಮಳೆಯಾಗುವ ನಿರೀಕ್ಷೆಯಿದೆ. ಆ.27 ಹಾಗೂ 28ರಂದು ಉತ್ತ ಒಳನಾಡಿನ ಬಹುತೇಕ ಭಾಗಗಳಲ್ಲಿ ಮಳೆಯಾಗುವ ಹೆಚ್ಚಿನ ಸಾಧ್ಯತೆಯಿದೆ. ಬೆಂಗಳೂರಿನಲ್ಲಿ ಮುಂದಿನ ಎರಡು ದಿನಗಳ ವರೆಗೆ ಮಳೆಯಾಗುವ ಹೆಚ್ಚಿನ ನಿರೀಕ್ಷೆಯಿದೆ. ಗರಿಷ್ಠ ಉಷ್ಣಾಂಶ 28 ಹಾಗೂ ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಮಾಹಿತಿ ನೀಡಿದೆ.