ಶಾಲೆ ಪ್ರಾರಂಭಿಸುವಂತೆ ಖಾಸಗಿ ಶಾಲೆಗಳ ಒಕ್ಕೂಟ ರುಪ್ಸಾ ಸಂಘಟನೆ ಸರ್ಕಾರಕ್ಕೆ ಡೆಡ್ ಲೈನ್ ಕೊಟ್ಟಿದೆ.ಶಾಲೆ ಪ್ರಾರಂಭಿಸದೇ ಹೋದ್ರೆ, ಆಗಸ್ಟ್ 2 ರಿಂದ ಶಾಲೆ ಓಪನ್ ಮಾಡಲು ನಾವು ಸಿದ್ದವಾಗಿದೇವೆ.ತಜ್ಞರ ಮಾರ್ಗಸೂಚಿ ಅನ್ವಯದಂತೆ ಶಾಲೆ ಪ್ರಾರಂಭ ಮಾಡ್ತೇವೆ. ರುಪ್ಸಾ ಒಕ್ಕೂಟದ ಅಡಿಯಲ್ಲಿ ಬರುವ ಸುಮಾರು 6 ಸಾವಿರಕ್ಕೂ ಹೆಚ್ಚು ಶಾಲೆಗಳು ಓಪನ್ ಮಾಡ್ತೇವೆ.ಸರ್ಕಾರದ ನಿರ್ಧಾರಕ್ಕೆ ಕಾಯಲು ಆಗುವುದಿಲ್ಲ.ಶಾಲೆ ಪ್ರಾರಂಭಕ್ಕೆ ಸರ್ಕಾರ ಹಿಂದೇಟು ಹಾಕುತ್ತಿದೆ.ಈಗಾಗಲೇ ಶಾಲೆ ಪ್ರಾರಂಭಿಸುವಂತೆ ಟಾಸ್ಕ್ ಪೋರ್ಸ್ ಸಮಿತಿ ಕೂಡ ಶಿಫಾರಸ್ಸು ಮಾಡಿದೆ.
ತಜ್ಞರು ಕೊಟ್ಟಿರುವ ಮಾರ್ಗಸೂಚಿ ಅನುಸರಿಸಿ ಶಾಲೆ ಓಪನ್ ಮಾಡುತ್ತೇವೆ ಎಂದು ರುಪ್ಸಾ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಸ್ಪಷ್ಟನೆ ನೀಡಿದ್ದಾರೆ