ಬೆಂಗಳೂರು ನಗರ ಸಾರಿಗೆ ಇಲಾಖೆ ಬಿಎಂಟಿಸಿ ನವೆಂಬರ್ ತಿಂಗಳಲ್ಲಿ ನಿಯಮ ಉಲ್ಲಂಘಿಸಿದವರಿಂದ ಭರ್ಜರಿ ಹಣ ಸಂಗ್ರಹಿಸಿದೆ.
ಈ ಬಗ್ಗೆ ಮಾಹಿತಿ ನೀಡಿದ ಬಿಎಂಟಿಸಿ ಅಧಿಕಾರಿಗಳು, ಬಿಎಂಟಿಸಿ ತನಿಖಾ ತಂಡ ನವೆಂಬರ್ ನಲ್ಲಿ ಒಟ್ಟು 20,432 ಟ್ರಿಪ್ ಗಳನ್ನು ತಪಾಸಣೆ ಮಾಡಿ 2580 ಟಿಕೆಟ್ ರಹಿತ ಪ್ರಯಾಣಿಕರನ್ನು ಪತ್ತೆ ಮಾಡಿದೆ. ಇಡೀ ತಿಂಗಳಿನಲ್ಲಿ ನಿಯಮ ಉಲ್ಲಂಘಿಸಿದ 2,794 ಪ್ರಯಾಣಿಕರಿಂದ ಬರೋಬ್ಬರಿ 4,26,734 ರೂ. ದಂಡ ಪಡೆಯಲಾಗಿದೆ. ಮಹಿಳಾ ಪ್ರಯಾಣಿಕರಿಗೆ ಮೀಸಲಿಟ್ಟಿದ್ದ ಆಸನಗಳಲ್ಲಿ ಕುಳಿತಿದ್ದ 214 ಪುರುಷ ಪ್ರಯಾಣಿಕರಿಂದ ಒಟ್ಟು 21,400 ರೂ. ಸಂಗ್ರಹಿಸಿದೆ.
ಇನ್ನು ಕರ್ತವ್ಯ ಲೋಪದ ಆರೋಪದಡಿ ಒಟ್ಟು 1642 ಪ್ರಕರಣಗಳು ಬಸ್ ನಿರ್ವಾಹಕರ ಮೇಲೆ ದಾಖಲಿಸಲಾಗಿದೆ ಎಂದು ಬಿಎಂಟಿಸಿ ಪ್ರಕಟಣೆಯಲ್ಲಿ ತಿಳಿಸಿದೆ.