Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ರೈಲು ಬರುವ ಕೆಲವೇ ನಿಮಿಷಗಳಲ್ಲಿಯೇ ಹಳಿಗಳ ಮೇಲೆ ಜಾರಿ ಬಿದ್ದ ವ್ಯಕ್ತಿಯ ಜೀವವನ್ನು ಆರ್ಪಿಎಫ್ ಸಿಬ್ಬಂದಿ ಕಾಪಾಡಿದ ಘಟನೆ ಬೆಂಗಳೂರಿನ ಕೆಆರ್ ಪುರಂ ರೈಲು ನಿಲ್ದಾಣದಲ್ಲಿ ನಡೆದಿದೆ. ಆರ್ಪಿಎಫ್ ಸಿಬ್ಬಂದಿಯ ತ್ವರಿತ ಕಾರ್ಯ, ಸಮಯಪ್ರಜ್ಞೆಯಿಂದ ವ್ಯಕ್ತಿಯ ಜೀವ ಉಳಿದಂತಾಗಿದೆ.
ರೈಲ್ವೆ ನಿಲ್ದಾಣದಲ್ಲಿನ ಸಿಸಿಟಿವಿ ದೃಶ್ಯಾವಳಿ ಪ್ರಕಾರ, ವ್ಯಕ್ತಿಯೊಬ್ಬ ಕಾಲು ಜಾರಿ ರೈಲ್ವೆ ಹಳಿ ಪಕ್ಕದಲ್ಲಿ ಬೀಳುತ್ತಾನೆ. ಆತ ಫ್ಲಾಟ್ ಫಾರ್ಮ್ ಏರಲು ಪ್ರಯತ್ನಿಸುತ್ತಾನೆ. ಆದರೆ ಸಾಧ್ಯವಾಗದೆ ಬೀಳುತ್ತಾನೆ. ಫ್ಲಾಟ್ ಫಾರ್ಮ್ ಮೇಲೆ ಇದ್ದ ಇಬ್ಬರು ಆರ್ಪಿಎಫ್ ಸಿಬ್ಬಂದಿ ಮತ್ತು ಮುಂದಿನ ಫ್ಲಾರ್ಟ್ ಫಾಮ್ ಮೇಲೆ ಇದ್ದ ಸಿಬ್ಬಂದಿ ಓಡಿ ಬಂದು ಅವರನ್ನು ಮೇಲಕೆತ್ತುತ್ತಾರೆ. ತದನಂತರ ಕೆಲವೇ ಕ್ಷಣಗಳಲ್ಲಿ ರೈಲು ರೈಲ್ವೆ ನಿಲ್ದಾಣ ತಲುಪುತ್ತದೆ.