Publish Date: Sat, 24 Aug 2019 (17:17 IST)
Updated Date: Sat, 24 Aug 2019 (17:19 IST)
ರೌಡಿ ಶೀಟರ್ ನೊಬ್ಬ ಲಾಂಗ್ ಝಳಪಿಸಿ ಹಾಡ ಹಗಲಲ್ಲೇ ಯುವಕನ ಮೇಲೆ ಹಲ್ಲೆ ಮಾಡಿದ ಘಟನೆಯಿಂದ ಆ ನಗರದ ಜನರು ಬೆಚ್ಚಿ ಬಿದ್ದಿದ್ದಾರೆ.
ಹಾಡ ಹಗಲೇ ಮಂಡ್ಯ ನಗರದಲ್ಲಿ ಜಳಪಿಸಿದ ಲಾಂಗು, ಮಚ್ಚುಗಳಿಂದ ಜನರು ಭಯಭೀತಗೊಂಡಿದ್ದಾರೆ.
ರೌಡಿ ಶೀಟರ್ ನಿಂದ ಯುವಕನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆದಿದೆ. ಮಂಡ್ಯ ನಗರದ ಸಂಜಯ ವೃತ್ತದಲ್ಲಿ ಘಟನೆ ನಡೆದಿದ್ದು, ಕೆಂಪೇಗೌಡ ನಗರದ ಅನಿಲ್ ಕುಮಾರ್ ಗಾಯಗೊಂಡ ಯುವಕನಾಗಿದ್ದಾನೆ. ಈತನನ್ನು ಮಂಡ್ಯ ಮಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಹಲ್ಲೆ ಮಾಡಿದ ಚಿಕ್ಕ ಮಂಡ್ಯದ ರೌಡಿ ಶೀಟರ್ ಪ್ರವೀಣ್ ಅಲಿಯಾಸ್ ಪಲ್ಲಿ ಮಂಡ್ಯನನ್ನು ಪಶ್ಚಿಮ ಠಾಣೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಹಲ್ಲೆ ನಡೆಯುವಾಗ ಅಕ್ಕಪಕ್ಕದಲ್ಲಿದ್ದ ಪೊಲೀಸರಿಂದ ಅನಿಲ್ ನನ್ನು ರಕ್ಷಣೆ ಮಾಡಲಾಗಿದೆ. ಹಳೇ ದ್ವೇಷದ ಹಿನ್ನಲೆಯಲ್ಲಿ ಸಂಭವಿಸಿದ ಘಟನೆ ಇದಾಗಿದೆ ಎನ್ನಲಾಗಿದೆ.