ಇತ್ತೀಚೆಗೆ ಪತ್ನಿಯ ಜತೆ ಬ್ಯಾಂಕ್‍ಗೆ ಬಂದಿದ್ದ ರೌಡಿಶೀಟರ್? ಬಬ್ಲಿಯನ್ನು ಹಾಡಹಗಲೇ ಬರ್ಬರವಾಗಿ ಹತ್ಯೆಗೈದಿದ್ದ ಪ್ರಕರಣದ ಸಂಬಂಧ ಹೆಚ್ಚಿನ ಮಾಹಿತಿಗಾಗಿ ಜೈಲಿನಲ್ಲಿರುವ ನಟೋರಿಯಸ್ ರೌಡಿಶೀಟರ್ ವಿಲ್ಸನ್ ಗಾರ್ಡನ್ ನಾಗನನ್ನು ಕೋರಮಂಗಲ ಪೆÇಲೀಸರು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ.
ಬಬ್ಲಿ ಕೊಲೆ ಪ್ರಕರಣದಲ್ಲಿ ನಾಗನ ಕೈವಾಡವಿರುವ ಶಂಕೆ ವ್ಯಕ್ತವಾಗಿದ್ದು, ಈತ ಜೈಲಿನಲ್ಲಿದ್ದುಕೊಂಡೇ ಕೊಲೆ ಮಾಡಿಸಿರುವ ಅನುಮಾನ ಮೂಡಿತ್ತು. ಹೀಗಾಗಿ, ಪೆÇಲೀಸರು ಕಲಬುರಗಿ ಜೈಲಿನಿಂದ ನಾಗನನ್ನು ಬಾಡಿ ವಾರೆಂಟ್ ಮೇರೆಗೆ ಕರೆತಂದಿದ್ದಾರೆ.
ಪ್ರಕರಣದ ಹಿನ್ನೆಲೆ:
ಕೋರಮಂಗಲ 8ನೇ ಹಂತದಲ್ಲಿರುವ ಯೂನಿಯನ್ ಬ್ಯಾಂಕ್‍ನಲ್ಲಿ ರೌಡಿ ಜೋಸೆಫ್? ಅಲಿಯಾಸ್ ಬಬ್ಲಿ ಎಂಬಾತನನ್ನು ಮಾರಕಾಸ್ತ್ರಗಳಿಂದ ಹೊಡೆದು ಕೊಲೆಮಾಡಲಾಗಿತ್ತು. ಮುಖಕ್ಕೆ ಬಟ್ಟೆ ಸುತ್ತಿಕೊಂಡು ಬೈಕ್‍ಗಳಲ್ಲಿ ಬಂದಿದ್ದ 8 ಮಂದಿ ಮುಸುಕುದಾರಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಂದು ಪರಾರಿಯಾಗಿದ್ದರು.
ಬೈಕ್?ನಲ್ಲಿ ಪತ್ನಿಯ ಜತೆ ಬಬ್ಲಿ ತೆರಳುತ್ತಿದ್ದ. ಈ ವೇಳೆ ಮುಸುಕುದಾರಿ ಗ್ಯಾಂಗ್? ಆತನ ಮೇಲೆ ದಾಳಿ ಮಾಡಿದೆ. ತಪ್ಪಿಸಿಕೊಳ್ಳುವ ಭರದಲ್ಲಿ ಬ್ಯಾಂಕ್? ಒಳಗೆ ಆತ ನುಗ್ಗಿದ್ದಾನೆ. ಅಲ್ಲಿಯೂ ಬಿಡದ ಗ್ಯಾಂಗ್? ಬ್ಯಾಂಕ್? ಒಳಗೆ ನುಗ್ಗಿ ಕೊಲೆ ಮಾಡಿದ್ದಾರೆ. ಆಡುಗೋಡಿ ಠಾಣೆಯ ರೌಡಿಶೀಟರ್‍ನಲ್ಲಿ ಬಬ್ಲಿಯ ಹೆಸರು ಇತ್ತು. ಸ್ಥಳೀಯ ರಾಜೇಂದ್ರ ಕೊಳಚೆ ಪ್ರದೇಶದ ನಿವಾಸಿಯಾಗಿರುವ ಬಬ್ಲಿ ಅಕ್ರಮವಾಗಿ ಮತಾಂತರದಲ್ಲಿ ತೊಡಗಿದ್ದ ಎನ್ನಲಾಗಿತ್ತು.