Daily Horoscope
✕

ರೌಡಿಶೀಟರ್‌ನನ್ನು ಮಹಜರಿಗೆ ಕರೆದೊಯ್ಯುವಾಗ ಪೊಲೀಸರ ಮೇಲೆ‌ ಹಲ್ಲೆ

Webdunia
ಸೋಮವಾರ, 27 ಸೆಪ್ಟಂಬರ್ 2021 (21:53 IST)
ಬೆಂಗಳೂರು: ರೌಡಿಶೀಟರ್‌ನನ್ನು ಮಹಜರಿಗೆ ಕರೆದೊಯ್ಯುವಾಗ ಪೊಲೀಸರ ಮೇಲೆ‌ ಹಲ್ಲೆ ನಡೆಸಿ ಪರಾರಿಯಾಗುತ್ತಿದ್ದ ವೇಳೆ ಕಾಲಿಗೆ ಗುಂಡು ಹಾರಿಸಿ ಅಶೋಕನಗರ ಪೊಲೀಸರು ಬಂಧಿಸಿದ್ದಾರೆ.
ಕೆಜಿಹಳ್ಳಿಯ ರೌಡಿಶೀಟರ್ ಸ್ಟಾಲಿನ್ ಗುಂಡೇಟಿಗೆ ಒಳಗಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಘಟನೆಯಲ್ಲಿ ಹೆಡ್‌ ಕಾನ್​ಸ್ಟೇಬಲ್‌ ಮಹೇಶ್ ಗಾಯಗೊಂಡಿದ್ದಾರೆ.
ಸೆ.12ರಂದು ಹತ್ಯೆಯಾದವನು ಯಾರು ಎಂಬುದನ್ನು ಪತ್ತೆ ಹಚ್ಚುವುದಕ್ಕೂ ಪೊಲೀಸರು ಹರಸಾಹಸ ಪಟ್ಟಿದ್ದರು. ಅಷ್ಟರಮಟ್ಟಿಗೆ ಮುಖದ ಗುರುತು ಸಹ ಸಿಗದಂತೆ ಕೆಜಿಹಳ್ಳಿ ಠಾಣೆಯ ರೌಡಿಶೀಟರ್ ಅರವಿಂದ್ ಅಶೋಕನಗರ ಠಾಣಾ ವ್ಯಾಪ್ತಿಯಲ್ಲಿ ಹಾಡಹಗಲೇ ಹೆಣವಾಗಿದ್ದ.
ಆರೋಪಿ ಮೇಲೆ ಗುಂಡು ಹಾರಿಸಿದ ಪೊಲೀಸರು: ಘಟನೆ ಸಂಬಂಧ ಪ್ರಕರಣದಲ್ಲಿ ಆರೋಪಿಗಳಾದ ಸ್ಟಾಲಿನ್, ಅರುಣ್, ವಿಜಯ್ ಕುಮಾರ್ ಹಾಗೂ ಜಾಕ್ ಲೂಯಿಸ್ ಎಂಬ ನಾಲ್ವರನ್ನು ಅಶೋಕನಗರ ಠಾಣಾ ಪೊಲೀಸರು ಬಂಧಿಸಿದ್ದರು.‌ ಸೋಮವಾರ ಮಹಜರಿಗೆ ಕರೆದೊಯ್ದಾಗ ಪೊಲೀಸರ ಮೇಲೆ ಹಲ್ಲೆ ಮಾಡಿ‌ ಪರಾರಿಯಾಗಲು ಸ್ಟಾಲಿನ್ ಯತ್ನಿಸಿದ್ದಾನೆ. ತಕ್ಷಣ ಎಚ್ಚೆತ್ತ ಪೊಲೀಸರು ಆರೋಪಿ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಜನರ ಬದುಕಿಗೆ ಬರೆ ಎಳೆದ ಕಾಂಗ್ರೆಸ್ ಸರ್ಕಾರ: ವಿಜಯೇಂದ್ರ

22 ಕ್ಯಾರಟ್ ಹಾಗೂ 24 ಕ್ಯಾರಟ್ ಚಿನ್ನದ ದರದಲ್ಲಿ ವ್ಯತ್ಯಾಸ, ಇಂದಿನ ದರ ಹೀಗಿದೆ

ಮೆಟ್ರೋ ನಿಲ್ದಾಣದಲ್ಲಿ ಅಮ್ಮನಿಂದ ಬೇರೆಯಾಗಿದ್ದ ಮಗ.. ಮುಂದೆ ಆಗಿದ್ದು ನಿಜಕ್ಕೂ ಮನಕಲಕುವ ಘಟನೆ Video

ಇಂದಿರಾ ನಗರದಲ್ಲಿ ಶಾಕಿಂಗ್ ಘಟನೆ: ಯುವತಿಯ ಕುತ್ತಿಗೆಗೆ ಚಾಕು ಹಿಡಿದ ಕಳ್ಳ, ಮುಂದಾಗಿದ್ದು ನಿಜಕ್ಕೂ ಶಾಕಿಂಗ್ Video

ಪಾಸ್ ಪೋರ್ಟ್ ನವೀಕರಣಕ್ಕೆ ಬಂದ ವ್ಯಕ್ತಿಯ ಪುಸ್ತಕ ನೋಡಿ ಅಧಿಕಾರಿಗಳೇ ಶಾಕ್: ಅಂತಹದ್ದೇನಿತ್ತು ನೀವೇ ನೋಡಿ Video

ಮುಂದಿನ ಸುದ್ದಿ
Show comments