Publish Date: Thu, 02 Mar 2023 (06:00 IST)
Updated Date: Thu, 02 Mar 2023 (00:02 IST)
ಬೆಂಗಳೂರು : ಐಪಿಎಸ್ ಅಧಿಕಾರಿ ರೂಪಾ ವಿರುದ್ಧ ಐಎಎಸ್ ಅಧಿಕಾರ ರೋಹಿಣಿ ಸಿಂಧೂರಿ ಒಂದರ ಮೇಲೊಂದು ಕಾನೂನು ಸಮರ ಮಾಡುತ್ತಿದ್ದಾರೆ.
ಈಗಾಗಲೇ ಮಾನನಷ್ಟ ಮೊಕದ್ದಮೆ ದಾಖಲು ಮಾಡಿರುವ ರೋಹಿಣಿ ಈಗ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿದ್ದಾರೆ. ಈಗಾಗಲೇ ಸಿಟಿ ಸಿವಿಲ್ ಕೋರ್ಟ್ ರೋಹಿಣಿ ಸಿಂಧೂರಿ ವಿರುದ್ಧ ಯಾವುದೇ ಹೇಳಿಕೆ ನೀಡಬಾರದು,
ತಮ್ಮ ಫೇಸ್ಬುಕ್ ಅಲ್ಲಿಯೂ ಯಾವುದೇ ಪೋಸ್ಟ್ ಹಾಕಬಾರದು ಎಂದು ಐಪಿಎಸ್ ರೂಪಾ ಅವರಿಗೆ ಆದೇಶ ನೀಡಿತ್ತು. ಆದರೆ ರೂಪಾ ಅವರು ರೋಹಿಣಿ ಸಿಂಧೂರಿ ವಿರುದ್ಧ ಮತ್ತೆ ಪೋಸ್ಟ್ಗಳನ್ನು ಮಾಡಿದ್ದು, ಈ ಹಿನ್ನೆಲೆಯಲ್ಲಿ ರೋಹಿಣಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದಾರೆ.