Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಒಮೈಕ್ರೋನ್ ಬಂದ್ರೆ ಮನೆ ರಸ್ತೆ ಸೀಲ್ ಡೌನ್

ಒಮೈಕ್ರೋನ್ ಬಂದ್ರೆ ಮನೆ ರಸ್ತೆ ಸೀಲ್ ಡೌನ್
ಬೆಂಗಳೂರು , ಶನಿವಾರ, 4 ಡಿಸೆಂಬರ್ 2021 (16:47 IST)
ಸೋಂಕಿತ ವೈದ್ಯನ ಮನೆ ಬೋರ್ಡ್ ಹಾಕಿ ರಸ್ತೆಯನ್ನು ಸೀಲ್ ಡೌನ್ ಮಾಡಿದ್ದ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಸ್ಥಳೀಯರು ಹಾಗೂ ತಜ್ಞರು ಕಿಡಿಕಾರಿದ್ದು, ಅಧಿಕಾರಿಗಳ ಈ ನಡೆ ಭಾರತೀಯ ವೈದ್ಯಕೀಯ ಸಂಘದ ಜಾರಿಗೆ ತಂದಿರುವ ನಿಯಮದ ವಿರುದ್ಧವಾಗಿದೆ ಎಂದು ಹೇಳಿದ್ದಾರೆ.ಪ್ರತಿಷ್ಠಿತ ಆಸ್ಪತ್ರೆಯೊಂದರಲ್ಲಿ ಕಾರ್ಯನಿರ್ವಹಿಸುತ್ತಿರುವ 46 ವರ್ಷದ ವೈದ್ಯನಲ್ಲಿ ಓಮಿಕ್ರಾನ್ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಗುರುವಾರ ರಾತ್ರಿ ಆರ್‌ಬಿಐ ಲೇಔಟ್‌ನಲ್ಲಿರುವ 6ನೇ ಅಡ್ಡರಸ್ತೆ, 7ನೇ ಮುಖ್ಯ ರಸ್ತೆಯನ್ನು ಸೀಲ್ ಡೌನ್ ಮಾಡಿದ್ದರು.
 
ವಿರೋಧಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಬಿಬಿಎಂಪಿ ಅಧಿಕಾರಿಗಳಉ ಔಪಚಾರಿಕವಾಗಿ ಸೀಲ್ ಡೌನ್ ಮಾಡಲಾಗಿರುವ ಕಂಟೈನ್ಮೆಂಟ್ ಹಾಗೂ ಕ್ಲಸ್ಟರ್ ವಲಯಗಳನ್ನು ತೆರವುಗೊಳಿಸಲಾಗುತ್ತದೆ ಎಂದು ಹೇಳಿದ್ದಾರೆ.
 
ಯಾರನ್ನೂ ಗುರುತಿಸುವುದು, ಅವಮಾನಿಸುವುದು ಇದರ ಉದ್ದೇಶವಲ್ಲ, ಆದರೆ ಇತರ ನಿವಾಸಿಗಳ ಸುರಕ್ಷತೆಯನ್ನು ಖಚಿತಪಡಿಸುವುದಾಗಿದೆ. ಬೆಂಗಳೂರಿನಲ್ಲಿ 60ಕ್ಕೂ ಹೆಚ್ಚು ಕ್ಲಸ್ಟರ್‌ಗಳಿದ್ದು, ಆದರೂ, ನಾವು ಸುಮ್ಮನಿದ್ದೆವು. ಆದರೆ ಈಗ ಮುಖ್ಯಮಂತ್ರಿಗಳು ಮತ್ತು ಆರೋಗ್ಯ ಸಚಿವರು ಕೂಡ ಜನರು ಜಾಗರೂಕರಾಗಿರಬೇಕು ಮತ್ತು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಹೇಳಿದ್ದಾರೆ. ಜನರ ಕೂಡ ಬೇಜವಾಬ್ದಾರಿಯುತವಾಗಿ ವರ್ತಿಸುತ್ತಿದ್ದು, ಹೀಗಾಗಿ ನಾವು ಕಠಿಣ ಕ್ರಮಗಳ ಕೈಗೊಳ್ಳಲೇಬೇಕಾಗಿದೆ ಎಂದು ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಭ್ರಷ್ಟ ಪೊಲೀಸರು ನಾಯಿಗಳು ಎಂದ ಗೃಹ ಸಚಿವರು