ಕಾಂತಾರ ಚಾಪ್ಟರ್ 1 ಬಗ್ಗೆ ಅಪ್ ಡೇಟ್ ಕೊಟ್ಟ ರಿಷಬ್ ಶೆಟ್ಟಿ

Krishnaveni K
ಮಂಗಳವಾರ, 7 ಮೇ 2024 (20:10 IST)
ಕುಂದಾಪುರ: ಜನ ಬಹಳ ಕಾತುರದಿಂದ ನಿರೀಕ್ಷಿಸುತ್ತಿರುವ ಕಾಂತಾರ ಚಾಪ್ಟರ್ 1 ಸಿನಿಮಾ ಬಗ್ಗೆ ರಿಷಬ್ ಶೆಟ್ಟಿ ಇಂದು ಮಾಧ್ಯಮಗಳ ಮುಂದೆ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ.

ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸುತ್ತಿರುವ ಕಾಂತಾರ ಚಾಪ್ಟರ್ 1 ಶೂಟಿಂಗ್ ಕುಂದಾಪುರದ ಕೆರಾಡಿಯಲ್ಲಿ ಭರದಿಂದ ಸಾಗುತ್ತಿದೆ. ಇಲ್ಲಿ ವಿಶೇಷ ಸೆಟ್ ಹಾಕಿಕೊಂಡು ರಿಷಬ್ ಆಂಡ್ ಟೀಂ ಕಳೆದ ಕೆಲವು ದಿನಗಳಿಂದ ಶೂಟಿಂಗ್ ನಲ್ಲಿ ತೊಡಗಿಸಿಕೊಂಡಿದೆ. ಚಿತ್ರದ ಬಗ್ಗೆ ಯಾವುದೇ ಮಾಹಿತಿ, ಫೋಟೋ ಲೀಕ್ ಆಗದಂತೆ ನೋಡಿಕೊಂಡಿದೆ.

ಆದರೆ ಇಂದು ರಿಷಬ್ ಮೊದಲ ಬಾರಿಗೆ ಮಾಧ‍್ಯಮಗಳ ಮುಂದೆ ಕಾಂತಾರ ಚಾಪ್ಟರ್ 1 ಬಗ್ಗೆ ಮಾಹಿತಿ ನೀಡಿದ್ದಾರೆ. ಕುಂದಾಪುರದಲ್ಲಿ ಇಂದು ಮತದಾನ ಮಾಡಿದ ಬಳಿಕ ಮಾಧ‍್ಯಮಗಳಿಗೆ ಅವರು ಪ್ರತಿಕ್ರಿಯೆ ನೀಡಿದರು. ಈ ವೇಳೆ ಕಾಂತಾರ ಚಾಪ್ಟರ್  ಶೂಟಿಂಗ್ ನಡೆಯುತ್ತಿರುವ ಬಗ್ಗೆ ಅಪ್ ಡೇಟ್ ಒದಗಿಸಿದರು.

‘ಇತ್ತೀಚೆಗೆ ಜನ ಸಿನಿಮಾವನ್ನು ಥಿಯೇಟರ್ ಗಿಂದ ನ್ಯೂಸ್ ನಲ್ಲೇ ನೋಡುತ್ತಾರೆ. ಜನರಿಗೆ ಈಗಲೇ ಕತೆ ಹೇಳಿದರೆ ಕುತೂಹಲವಿರದು. ಶೂಟಿಂಗ್ ಶುರುವಾಗಿದೆ. ಅಂದುಕೊಂಡಂತೆಯೇ ಚೆನ್ನಾಗಿ ನಡೆಯುತ್ತಿದೆ. ತುಂಬ ದೊಡ್ಡ ತಂಡ ಇದಕ್ಕಾಗಿ ಕೆಲಸ ಮಾಡುತ್ತಿದೆ. ಕಾಂತಾರ ಮೊದಲ ಸಿನಿಮಾ ಸಕ್ಸಸ್ ಆಗಿರುವುದರಿಂದ ಈ ಬಾರಿ ನಮ್ಮ ಮೇಲೆ ಮತ್ತಷ್ಟು ಜವಾಬ್ಧಾರಿಯಿದೆ. ಸಿನಿಮಾ ಬಗ್ಗೆ ಬಾಯಿ ಮಾತಿನಲ್ಲಿ ಹೇಳುವ ಬದಲು ಸಿನಿಮಾ ಮೂಲಕವೇ ಮಾತನಾಡಿದರೆ ಉತ್ತಮ’ ಎಂದು ರಿಷಬ್ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನಿರುದ್ಯೋಗಿಗಳಿಗೆ ಗುಡ್‌ನ್ಯೂಸ್‌ ಕೊಟ್ಟ ಸಿದ್ದರಾಮಯ್ಯ: ಬರೋಬ್ಬರಿ ಅರ್ಧ ಲಕ್ಷ ಹುದ್ದೆಗಳ ಭರ್ತಿಗೆ ಕ್ರಮ

ಮಗು ಎತ್ತಿಕೊಂಡೇ ಮೂಟೆ ಹೊರುವ ಅಮ್ಮನ ಕಾಯಕಕ್ಕೆ: ಮನಕಲಕುವ ವಿಡಿಯೋ

1 ಲಕ್ಷ ಕೋಟಿಗೂ ಅಧಿಕ ಸಾಲ ಮಾಡಲು ಹೊರಟ ಸಿದ್ದರಾಮಯ್ಯ, ಇದೂ ದಾಖಲೆ: ಛಲವಾದಿ ನಾರಾಯಣಸ್ವಾಮಿ ವ್ಯಂಗ್ಯ

Gold Price: ಇಂದಿನ ಚಿನ್ನ,ಬೆಳ್ಳಿ ದರ ವಿವರ ಇಲ್ಲಿದೆ

Arecanut Price: ಅಡಿಕೆ, ಕೊಬ್ಬರಿ ಇಂದಿನ ಬೆಲೆ ಇಲ್ಲಿದೆ

ಮುಂದಿನ ಸುದ್ದಿ
Show comments