Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಕುಂದಾಪುರ: ಜನ ಬಹಳ ಕಾತುರದಿಂದ ನಿರೀಕ್ಷಿಸುತ್ತಿರುವ ಕಾಂತಾರ ಚಾಪ್ಟರ್ 1 ಸಿನಿಮಾ ಬಗ್ಗೆ ರಿಷಬ್ ಶೆಟ್ಟಿ ಇಂದು ಮಾಧ್ಯಮಗಳ ಮುಂದೆ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ.
ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸುತ್ತಿರುವ ಕಾಂತಾರ ಚಾಪ್ಟರ್ 1 ಶೂಟಿಂಗ್ ಕುಂದಾಪುರದ ಕೆರಾಡಿಯಲ್ಲಿ ಭರದಿಂದ ಸಾಗುತ್ತಿದೆ. ಇಲ್ಲಿ ವಿಶೇಷ ಸೆಟ್ ಹಾಕಿಕೊಂಡು ರಿಷಬ್ ಆಂಡ್ ಟೀಂ ಕಳೆದ ಕೆಲವು ದಿನಗಳಿಂದ ಶೂಟಿಂಗ್ ನಲ್ಲಿ ತೊಡಗಿಸಿಕೊಂಡಿದೆ. ಚಿತ್ರದ ಬಗ್ಗೆ ಯಾವುದೇ ಮಾಹಿತಿ, ಫೋಟೋ ಲೀಕ್ ಆಗದಂತೆ ನೋಡಿಕೊಂಡಿದೆ.
ಆದರೆ ಇಂದು ರಿಷಬ್ ಮೊದಲ ಬಾರಿಗೆ ಮಾಧ್ಯಮಗಳ ಮುಂದೆ ಕಾಂತಾರ ಚಾಪ್ಟರ್ 1 ಬಗ್ಗೆ ಮಾಹಿತಿ ನೀಡಿದ್ದಾರೆ. ಕುಂದಾಪುರದಲ್ಲಿ ಇಂದು ಮತದಾನ ಮಾಡಿದ ಬಳಿಕ ಮಾಧ್ಯಮಗಳಿಗೆ ಅವರು ಪ್ರತಿಕ್ರಿಯೆ ನೀಡಿದರು. ಈ ವೇಳೆ ಕಾಂತಾರ ಚಾಪ್ಟರ್ ಶೂಟಿಂಗ್ ನಡೆಯುತ್ತಿರುವ ಬಗ್ಗೆ ಅಪ್ ಡೇಟ್ ಒದಗಿಸಿದರು.
ಇತ್ತೀಚೆಗೆ ಜನ ಸಿನಿಮಾವನ್ನು ಥಿಯೇಟರ್ ಗಿಂದ ನ್ಯೂಸ್ ನಲ್ಲೇ ನೋಡುತ್ತಾರೆ. ಜನರಿಗೆ ಈಗಲೇ ಕತೆ ಹೇಳಿದರೆ ಕುತೂಹಲವಿರದು. ಶೂಟಿಂಗ್ ಶುರುವಾಗಿದೆ. ಅಂದುಕೊಂಡಂತೆಯೇ ಚೆನ್ನಾಗಿ ನಡೆಯುತ್ತಿದೆ. ತುಂಬ ದೊಡ್ಡ ತಂಡ ಇದಕ್ಕಾಗಿ ಕೆಲಸ ಮಾಡುತ್ತಿದೆ. ಕಾಂತಾರ ಮೊದಲ ಸಿನಿಮಾ ಸಕ್ಸಸ್ ಆಗಿರುವುದರಿಂದ ಈ ಬಾರಿ ನಮ್ಮ ಮೇಲೆ ಮತ್ತಷ್ಟು ಜವಾಬ್ಧಾರಿಯಿದೆ. ಸಿನಿಮಾ ಬಗ್ಗೆ ಬಾಯಿ ಮಾತಿನಲ್ಲಿ ಹೇಳುವ ಬದಲು ಸಿನಿಮಾ ಮೂಲಕವೇ ಮಾತನಾಡಿದರೆ ಉತ್ತಮ ಎಂದು ರಿಷಬ್ ಹೇಳಿದ್ದಾರೆ.