Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಜನಾಭಿಪ್ರಾಯಕ್ಕೂ ಮೊದಲೇ ಶಾಲೆ ತಲುಪಿದ ಪರಿಷ್ಕರಿಸಿದ ಪಠ್ಯ ಪುಸ್ತಕಗಳು..!

ಜನಾಭಿಪ್ರಾಯಕ್ಕೂ ಮೊದಲೇ ಶಾಲೆ ತಲುಪಿದ ಪರಿಷ್ಕರಿಸಿದ ಪಠ್ಯ ಪುಸ್ತಕಗಳು..!
bangalore , ಮಂಗಳವಾರ, 14 ಜೂನ್ 2022 (20:22 IST)
ಪಠ್ಯ ಪುಸ್ತಕ ವಿವಾದಕ್ಕೆ ಕೊನೆಯೇ ಇಲ್ಲದಂತಾಗ್ತಿದೆ, ಹೊಸ ಪರಿಷ್ಕೃತ ಪಠ್ಯವನ್ನ ಸರ್ಕಾರ ಪಬ್ಲಿಕ್ ಡೊಮೈನ್ ಗೆ ಇಟ್ಟು ತಪ್ಪುಗಳಿದ್ದರೆ ಸರಿಪಡಿಸುವುದಾಗಿ ಹೇಳಿತ್ತು. ಆದ್ರೆ ಇದೀಗ ಜನಾಭಿಪ್ರಾಯಕ್ಕೆ ಇಡೋ ಮುಂಚೆಯೇ ಶಾಲೆಗಳಿಗೆ ಪುಸ್ತಕಗಳು ರವಾನೆಯಾಗಿ ಮಕ್ಕಳಿಗೆ ತಲುಪಿವೆ, ಸರ್ಕಾರದ ಈ ದ್ವಂದ್ವ ನಿಲುವಿನ ವಿರುದ್ದ ಆಕ್ರೋಶ ಮತ್ತಷ್ಟು ಹೆಚ್ಚಾಗ್ತಿದೆ.ರೋಹಿತ್ ಚಕ್ರತೀರ್ಥ ಅವರ ಸಮಿತಿಯ ಪಠ್ಯ ಪರಿಷ್ಕರಣೆ ವಿವಾದಕ್ಕೆ ಕೊನೆಯೇ ಇಲ್ವಾ ಅನ್ನುವಂತಾಗಿದೆ. ದಿನಕ್ಕೊಂದು ಸ್ವರೂಪ ಪಡೆಯುತ್ತಿರುವ ಪರಿಷ್ಕರಣೆ ವಿವಾದ ಕಳೆದ ವಾರ ಒಂದು ತಾರ್ಕಿಕ ಅಂತ್ಯಕ್ಕೆ ಬಂದು ನಿಂತಿತ್ತು. ಎಲ್ಲಾ ಸರಿಹೋಯ್ತು ಅಂದು ಕೊಂಡಿರೋ ಮಧ್ಯೆಯೇ ಮತ್ತೊಂದು ವಿವಾದ ಭುಗಿಲೆದ್ದಿದೆ, ಚಕ್ರತೀರ್ಥ ಪಠ್ಯದಲ್ಲಿ ಆಕ್ಷೇಪಾರ್ಹ ಅಂಶಗಳ ಬದಲಾವಣೆಗೆ ಪರಿಷ್ಕೃತ ಪಠ್ಯ ವನ್ನ ಸರ್ಕಾರ ಪಬ್ಲಿಕ್ ಡೊಮೈನ್ ಗೆ ಇಡಲು ನಿರ್ಧರಿಸಿತ್ತು. ಜನಾಭಿಪ್ರಾಯದಲ್ಲಿ ದೂರು ಬಂದ್ರೆ ಅದನ್ನು ಪುನರ್ ಪರಿಶೀಲಿಸುವುದಾಗಿ ಹೇಳಿದ್ದರು ಶಿಕ್ಷಣ ಸಚಿವರು. ಆದ್ರೀಗ ಜನಾಭಿಪ್ರಾಯಕ್ಕೂ ಮೊದಲೇ ಶಾಲೆಗಳಿಗೆ ಹೊಸ ಪುಸ್ತಕಗಳನ್ನ ರವಾನೆ ಮಾಡಲಾಗ್ತಿದೆ.
ಚಕ್ರತೀರ್ಥ ಸಮಿತಿ ಪರಿಷ್ಕರಿಸಿದ 1 ರಿಂದ 10ನೇ ತರಗತಿಯ ಪಠ್ಯ ಪುಸ್ತಕಗಳು ಈಗಾಗ್ಲೆ ಶೇ. 80 ರಷ್ಟು ಪ್ರಿಂಟ್ ಆಗಿವೆ. ಇದರಲ್ಲಿ ಶೇ 50 ರಷ್ಟು ಪುಸ್ತಕಗಳನ್ನ ಶಾಲೆಗಳಿಗೆ ಕಳಿಸಲಾಗಿದೆ, ಇವುಗಳನ್ನು ಮಕ್ಕಳಿಗೆ ನೀಡಲು ಶಿಕ್ಷಕರು ತಯಾರಾಗಿದ್ದಾರೆ. ಶಾಲೆಗಳು ಆರಂಭವಾಗಿ 20 ದಿನ ಕಳೆದಿರೋದ್ರಿಂದ ಮಕ್ಕಳ ಕಲಿಕಾ ಚೇತರಿಕೆ ಅಭಿಯಾನ ಮುಗಿದಿದ್ದು ನಾಳೆಯಿಂದ ಅಧಿಕೃತ ಪಠ್ಯ ಭೋಧನೆ ಆರಂಭವಾಗಬೇಕು. ಈ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಹೊಸ ಪುಸ್ತಕಗಳನ್ನ ಮಕ್ಕಳಿಗೆ ಕೊಟ್ಟು ಶಿಕ್ಷಕರು ಪಾಠ- ಪ್ರವಚನ ಆರಂಭಿಸಲು ಮೌಖಿಕ ಆದೇಶ ನೀಡಿದೆ. ಈ ಹಿನ್ನೆಲೆಯಲ್ಲಿ ಶಿಕ್ಷಕರು ತಾಯಾರಾಗಿದ್ದಾರೆ ಇನ್ನು ಮುದ್ರಣವಾಗಬೇಕಿರುವ 20 ರಷ್ಟು ಪಠ್ಯ ಪ್ರಿಂಟ್ ಗೂ ತಡೆ ಬಿದ್ದಿಲ್ಲ ಅದೂ ಪ್ರಿಂಟ್ ಆಗುತ್ತಿದೆ.
 
ಇನ್ನು ಶಿಕ್ಷಣ ಇಲಾಖೆ ಹಾಗೂ ಸರ್ಕಾರದ ಈ ದ್ವಂದ್ವ ನಿರ್ಧಾರಕ್ಕೆ ಪ್ರಗತಿಪರರು, ಸಾಹಿತಿಗಳು, ಚಿಂತಕರು ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ. ಸರ್ಕಾರ ಹೇಳಿದ್ದೇನೆ ಮಾಡ್ತಿರೋದೇನು, ವಿವಾದಿತ ಅಂಶಗಳನ್ನು ತೆಗೆದು ನಂತರ ಮಕ್ಕಳಿಗೆ ಪಠ್ಯ ಪುಸ್ತಕ ಕೊಡ್ತೇವೆ ಅಂತ ಹೇಳಿತ್ತು. ಆದ್ರೀಗ ಜನಾಭಿಪ್ರಾಯಕ್ಕೂ ಮೊದಲೇ ಪುಸ್ತಕಗಳು ಮಕ್ಕಳ ಕೈ ಸೇರ್ತಿವೆ. ಈಗಾಗ್ಲೆ 6 ಲಕ್ಷಕ್ಕೂ ಹೆಚ್ಚಿನ ಪುಸ್ತಕಗಳು ಮೂಲೆಗುಂಪಾಗಿವೆ, ಇದರಿಂದಾಗಿ ಸರ್ಕಾರಕ್ಕೆ 2.50 ಕೋಟಿ ಹಣ ಲಾಸ್ ಆಗಿದೆ. ಏನುಬೇಕಾದ್ರು ಆಗಲಿ ವಿದ್ಯಾರ್ಥಿಗಳ ಭವಿಷ್ಯ ಹಾಳಾಗಲಿ ನಮ್ಮ ಹಟ ಗೆಲ್ಲಬೇಕು ಎಂಬುದು ಈ ಸರ್ಕಾರದ ನಿರ್ಧಾರ. ನಾವು ಸರ್ಕಾರದ ಆದೇಶವನ್ನು ಖಂಡಿಸುತ್ತೇವೆ ಶಿಕ್ಷಣ ಇಲಾಖೆ ಮತ್ತು ಸಚಿವರ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆ ಮಾಡ್ತೇವೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.ಸರ್ಕಾರ ಮಕ್ಕಳ ಶೈಕ್ಷಣಿಕ ಜೀವನದ ಜೊತೆ ಚೆಲ್ಲಾಟವಾಡ್ತಿದೆ, ಪಬ್ಲಿಕ್ ಡೊಮೈನ್ ಗೆ ಇಡ್ತೇವೆ ತಪ್ಪುಗಳಿದ್ರೆ ಸರಿಪಡಿಸ್ತೇವೆಂದು ಹೇಳಿ ಈಗೇಕೆ ಈ ಆತುರದ ಪಠ್ಯ ವಿತರಣೆ. ಇದರಿಂದ ಸರ್ಕಾರ ಯಾವ ಸಂದೇಶವನ್ನು ರವಾನೆ ಮಾಡ್ತಿದೆ, ಮಕ್ಕಳ ಭವಿಷ್ಯಕ್ಕಿಂತ ನಿಮ್ಮ ಹಠವೇ ಮುಖ್ಯನಾ ಎಂದು ಪ್ರಶ್ನಿಸ್ತಿದ್ದಾರೆ ಜನರು

Share this Story:

Follow Webdunia kannada

ಮುಂದಿನ ಸುದ್ದಿ

ಏರ್ ಇಂಡಿಯಾಗೆ 10 ಲಕ್ಷ ರೂ.ದಂಡ!