Publish Date: Friday, 30 January 2026 (17:42 IST)
Updated Date: Friday, 30 January 2026 (01:44 IST)
ಬೆಂಗಳೂರು : ಕಾಮಗಾರಿಗಿಂತ ಬೆಂಗಳೂರಿನ ಗೌರವ ಉಳಿಸಿಕೊಳ್ಳಬೇಕು ಎಂದು ಬಿಜೆಪಿ ಸರ್ಕಾರಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಟಾಂಗ್ ನೀಡಿದ್ದಾರೆ.
ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಬೆಂಗಳೂರಿನ ಹಲವಾರು ರಸ್ತೆಗಳು ಜಲಾವೃತಗೊಂಡಿದ್ದು, ತಗ್ಗು ಪ್ರದೇಶದಲ್ಲಿರುವ ಮನೆಗಳಿಗೆ ನೀರು ನುಗ್ಗಿದೆ.
ಸದ್ಯ ಈ ಕುರಿತಂತೆ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಮಗಾರಿಗಿಂತ ಬೆಂಗಳೂರಿನ ಗೌರವ ಉಳಿಸಿಕೊಳ್ಳಬೇಕು. ಬಂಡವಾಳ ಹೂಡಿಕೆ ಬಗ್ಗೆ ಮೊದಲಿನಂತೆ ಆಸಕ್ತಿ ತೋರುತ್ತಿಲ್ಲ.
ಅಭಿವೃದ್ಧಿ ಅಜೆಂಡಾ ಬಿಟ್ಟು ಕಮ್ಯುನಲ್ ಅಜೆಂಡಾ ಮುಂದಿಡುತ್ತಿದ್ದಾರೆ. ಅವರು ಮಾಡಿರುವ ಬಜೆಟ್ ಬಗ್ಗೆ ಅವರೇ ಮಾತನಾಡಲು ಆಗುತ್ತಿಲ್ಲ.
ಪಠ್ಯಪುಸ್ತಕ ಪರಿಷ್ಕರಣೆ ವಿವಾದ ಕುರಿತಂತೆ ಪ್ರತಿಕ್ರಿಯಿಸಿದ ಅವರು, ನಮಗೆ ನಮ್ಮ ಇತಿಹಾಸದ ಭಗತ್ ಸಿಂಗ್ ಹಿಂದೆ ಏನಿತ್ತು ಎನ್ನುವುದು ಇರಬೇಕು. ರಾಮಾಯಣ, ಮಹಾಭಾರತದಲ್ಲಿ ಏನಿತ್ತು ಅದೆಲ್ಲವೂ ಇರಬೇಕು. ಕುಮಾರ್ ಹೇಳುತ್ತಾರೆ ಅಷ್ಟೇ. ಆಗ ಅವರು ಎಲ್ಲಿಗೆ ಹೋಗಿದ್ದರು ಎಂದು ಪ್ರಶ್ನಿಸಿದ್ದಾರೆ.