ತುಮಕೂರಿನಲ್ಲಿ ಮಾತನಾಡದ ಅವರು, ‘ಡಿಕೆಶಿ ಹೊರಬರುವುದು ಕೈ ನಾಯಕರಿಗೆ ಇಷ್ಟವಿಲ್ಲ. ಕಾಂಗ್ರೆಸ್ ನಾಯಕರ ವರ್ತನೆ ಅನುಮಾನ ಮೂಡಿಸಿದೆಡಿಕೆ ಶಿವಕುಮಾರ್ ಕಾಂಗ್ರೆಸ್ ನ ಪ್ರಭಾವಿ ಮುಖಂಡರು. ಅವರು ಹೊರಗೆ ಬಂದ್ರೆ ಪ್ರತಿಪಕ್ಷದ ನಾಯಕರಾಗಬಹುದು. ಕೆಪಿಸಿಸಿ ರಾಜ್ಯಾಧ್ಯಕ್ಷರಾಗಬಹುದು ಎಂದು ಸಹಿಸಲಾಗದೇ ಅವರು ಶಾಶ್ವತವಾಗಿ ಜೈಲಿನಲ್ಲೇ ಇರುವಂತೆ ಪ್ಲಾನ್ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಹಾಗೇ ಡಿಕೆಶಿ ಬಂಧನಕ್ಕೂ ಕೇಂದ್ರಕ್ಕೂ ಸಂಬಂಧವೇ ಇಲ್ಲ. ಬಿಜೆಪಿ ದ್ವೇಷದ ರಾಜಕಾರಣ ಮಾಡಲ್ಲ. ಡಿಕೆಶಿಯನ್ನು ಬಂಧಿಸಬೇಕೆಂದು ಬಿಜೆಪಿ ಎಲ್ಲೂ ಹೇಳಿಲ್ಲ. ಇಡಿ ಅಧಿಕಾರಿಗಳು ತಮ್ಮ ಕೆಲಸವನ್ನು ತಾವು ಮಾಡಿದ್ದಾರೆ. ಪ್ರತಭಟನೆ ಮಾಡಿ ಜಾತಿಗಳ ಮಧ್ಯ ಸಂಘರ್ಷ ತಂದಿಡುವುದು ಒಳ್ಳೆಯದಲ್ಲ. ಡಿಕೆಶಿ ಪರ ಹೋರಾಟ ಮಾಡುವುದು ಕೋರ್ಟ್ ಗೆ ವಿರುದ್ಧ ಎಂದು ಅವರು ತಿಳಿಸಿದ್ದಾರೆ.