Publish Date: Mon, 02 Mar 2020 (11:43 IST)
Updated Date: Mon, 02 Mar 2020 (11:46 IST)
ಬೆಂಗಳೂರು : ಪಾಕ್ ಗೆ ಜೈ ಅಂದವರಿಗೆ ಕಂಡಲ್ಲಿ ಗುಂಡಿಕ್ಕಿದರೆ ತಪ್ಪಿಲ್ಲ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಹೇಳಿದ್ದಾರೆ.
ಪಾಕ್ ಪರ ಘೋಷಣೆ ಕೂಗಿದರೆ ಸುಮ್ಮನೆ ಇರಬೇಕಾ. ತಾಕತ್ತಿದ್ದರೆ ಪಾಕಿಸ್ತಾನದಲ್ಲಿ ನಿಂತು ಭಾರತಕ್ಕೆ ಜೈ ಅನ್ನಲಿ, ಪಾಕ್ ನಲ್ಲಿ ಭಾರತಕ್ಕೆ ಜೈ ಅಂದು ಜೀವಸಹಿತ ಬರಲಿ ಎಂದು ಅವರು ದೇಶದ್ರೋಹಿಗಳಿಗೆ ಸವಾಲು ಹಾಕಿದ್ದಾರೆ.
ಯತ್ನಾಳ್ ಪರ ಬ್ಯಾಟ್ ಬೀಸಿದ ರೇಣುಕಾಚಾರ್ಯ, ದೊರೆಸ್ವಾಮಿ ಅವರ ಬಗ್ಗೆ ನನಗೆ ಅತ್ಯಂತ ಗೌರವವಿದೆ. ಮಾತನಾಡಬೇಕಾದರೆ ಅವರು ಯೋಚನೆ ಮಾಡಲಿ ಎಂದು ಹೇಳಿದ್ದಾರೆ.