Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ದಿಢೀರ್ ಪ್ರತಿಭಟನೆ ನಡೆಸಿದ ನಿರಾಶ್ರಿತರು: ಕಾರಣ ಗೊತ್ತಾ?

ದಿಢೀರ್ ಪ್ರತಿಭಟನೆ ನಡೆಸಿದ ನಿರಾಶ್ರಿತರು: ಕಾರಣ ಗೊತ್ತಾ?
ಕೊಡಗು , ಗುರುವಾರ, 30 ಆಗಸ್ಟ್ 2018 (14:39 IST)
ಆ ಜನರು ಮಹಾಮಳೆಗೆ ತತ್ತರಿಸಿ ಹೋಗಿದ್ದಾರೆ. ತೀವ್ರ ಸಂಕಷ್ಟದಲ್ಲಿರುವ ಸಂತ್ರಸ್ತರು ದಿಢೀರ್ ಪ್ರತಿಭಟನೆ ನಡೆಸಿದ್ದಾರೆ.

ನಿರಾಶ್ರಿತರ ಕೇಂದ್ರದಲ್ಲಿ ಮೂಲಭೂತ ಸೌಕರ್ಯಗಳು‌ ಇಲ್ಲ ಎಂದು ಅರೋಪಿಸಿ‌‌ ದಿಢೀರ್ ಅಗಿ ಪ್ರತಿಭಟನೆ ನಡೆಸಿರುವ ಘಟನೆ ನಡೆದಿದೆ. ಕೊಡಗು ಜಿಲ್ಲೆಯ ಸೋಮವಾರಪೇಟೆ ‌ತಾಲ್ಲೂಕಿನ‌ ಕುಶಾಲನಗರದ  ವಾಲ್ಮೀಕಿ ಭವನದಲ್ಲಿ ಈ ಘಟನೆ ನಡೆದಿದೆ.

ಮದ್ಯಾಹ್ನ ಊಟ ಕೊಡಬೇಕಾದ ಕೇಂದ್ರದಲ್ಲಿ ಸಂಜೆ ನಾಲ್ಕು ಘಂಟೆ ವೇಳೆಗೆ ಊಟ ನೀಡಿದ್ದಾರೆ. ಆದರೆ ಊಟಕ್ಕೆ ಅರ್ಧ ಬೆಂದಿರುವ ಅನ್ನ ನೀಡಿದ್ದಾರೆ ಎಂದು ನಿರಾಶ್ರಿತರು ಅಕ್ರೋಶ ವ್ಯಕ್ತ ಪಡಿಸಿದ್ದಾರೆ. ಅಲ್ಲದೇ ಮುನ್ನೂರು ಜನಕ್ಕೆ ಕೇವಲ ಮೂರು ಶೌಚಾಲಯಗಳು ಇವೆ. ವಿದ್ಯುತ್ ವ್ಯವಸ್ಥೆ ಇಲ್ಲದೆ ಕತ್ತಲೆಯಲ್ಲೆ ಕಾಲ ಕಾಳಿಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದ್ದಾರೆ. ಇಷ್ಟು ದಿನ ಮಡಿಕೇರಿ ಸೇವಾ ಭಾರತೀಯವರು ತಮ್ಮ ಮಕ್ಕಳಂತೆ ನೋಡಿಕೋಳುತ್ತಿದ್ದರು. ಆದರೆ ಇಲ್ಲಿ ಅಧಿಕಾರಿಗಳು ತಮ್ಮನೆ ಬಿಕ್ಷುಕರಂತೆ ನೋಡುತ್ತಿದ್ದಾರೆ. ಅವ್ಯವಸ್ಥೆಯನ್ನು ಪ್ರಶ್ನೆ ಮಾಡಿದರೆ ಪೋಲಿಸರನ್ನು ಕರೆಸಿ ಧಮ್ಕಿ ಹಾಕುತ್ತಾರೆ ಎಂದು. ಇದೇ ರೀತಿ ಮುಂದುವರೆದರೆ ಪ್ರತಿಭಟನೆ ಮತ್ತೆ ನಡೆಸುವುದಾಗಿ ನಿರಾಶ್ರಿತರು ಎಚ್ಚರಿಕೆ ನೀಡಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ದಾವಣಗೆರೆಯ ಆರೋಗ್ಯಮಾತೆ ವಿಗ್ರಹದಲ್ಲಿ ಕಣ್ಣೀರಧಾರೆ; ಭಕ್ತರಲ್ಲಿ ಆತಂಕ