Publish Date: Wed, 12 Apr 2023 (14:58 IST)
Updated Date: Wed, 12 Apr 2023 (15:11 IST)
ನೈರುತ್ಯ ರೈಲ್ವೆಯು ದಾಖಲೆ ಪ್ಯಾಸೆಂಜರ್- ಆದಾಯ ಮತ್ತು ವಲಯಗಳ ಸಮಯಪಾಲನೆಯಲ್ಲಿ 3ನೇ ಸ್ಥಾನ ಪಡೆದಿದೆ.ನೈರುತ್ಯ ರೈಲ್ವೆಯು ಪ್ಯಾಸೆಂಜರ್ ಆದಾಯದಲ್ಲಿ ರೂ. 2,755 ಕೋಟಿ ದಾಖಲೆಯಾಗಿದೆ.2022-23ರ ಆರ್ಥಿಕ ವರ್ಷದಲ್ಲಿ 116 ರೈಲುಗಳ ವೇಗವನ್ನು ಹೆಚ್ಚಿಸಲಾಗಿದೆ.ಭಾರತೀಯ ರೈಲ್ವೆಯ ಎಲ್ಲಾ ವಲಯಗಳ ಪೈಕಿ ನೈರುತ್ಯ ರೈಲ್ವೆಯು ಸಮಯಪಾನೆಯಲ್ಲಿ 93.12ರಷ್ಟು ಪಡೆದು 3ನೇ ಸ್ಥಾನ ರೈಲ್ವೆ ಇಲಾಖೆ ಗಳಿಸಿದೆ.
ಭಾರತೀಯ ರೈಲ್ವೆಯ ಎಲ್ಲಾ ವಲಯಗಳ ಪೈಕಿ ನೈರುತ್ಯ ರೈಲ್ವೆಯು ಸಮಯಪಾನೆಯಲ್ಲಿ 93.12ರಷ್ಟು ಪಡೆದು 3ನೇ ಸ್ಥಾನದಲ್ಲಿದೆ.ಪ್ರಯಾಣಿಕರಿಗೆ ಹೆಚ್ಚಿನ ರೈಲು ಸೇವೆ ಒದಗಿಸುವ ಉದ್ದೇಶದಿಂದ ಹಲವಾರು ಕ್ರಮಗಳನ್ನು ಕೈಗೊಂಡಿದೆ.ಸಮಯ ಪಾಲನೆಯಲ್ಲಿ ಅತ್ಯುತ್ತಮ ಸಾಧನೆ ಇದೆ.2022-23ರ ಆರ್ಥಿಕ ವರ್ಷದ ಅವಧಿಯಲ್ಲಿ 116 ರೈಲುಗಳ ವೇಗ ಹೆಚ್ಚಳವಾಗಿದೆ. 2,816 ನಿಮಿಷಗಳ ಸಮಯ ಉಳಿತಾಯವಾಗಲಿದೆ.ಮಾಲಿನ್ಯ ಕಡಿಮೆಗೊಳಿಸಲು ಮತ್ತು ಡೀಸೆಲ್ ಉಳಿಸಲು 24 ರೈಲುಗಳನ್ನು ವಿದ್ಯುತ್‌ಗೆ ವರ್ಗಾವಣೆಯಾಗಲಿದೆ.ರಜೆ ಮತ್ತು ಹಬ್ಬದ ಸಮಯದಲ್ಲಿ ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ 291 ವಿಶೇಷ ರೈಲು ವ್ಯವಸ್ಥೆ ಮಾಡಲಾಗಿದೆ.ಪ್ರಯಾಣಿಕರ ಅನುಕೂಲಕ್ಕಾಗಿ 253 ಬೋಗಿಗಳ ಹೆಚ್ಚಳ ಮಾಡಲಾಗಿದೆ.