Publish Date: Thu, 14 Oct 2021 (20:34 IST)
Updated Date: Thu, 14 Oct 2021 (20:38 IST)
ಕರೋನ ಹೊಡೆತಕ್ಕೆ ಸಿಲುಕಿ ನಲುಗಿದ್ದ ಕನ್ನಡ ಚಿತ್ರೋದ್ಯಮ ಒಂದೂವರೆ ವರ್ಷದಿಂದ ಸಾಕಷ್ಟು ಸವಾಲುಗಳನ್ನ ಎದುರಿಸಿತ್ತು. ಕರೋನ ಎರಡನೇ ಅಲೆ ನಂತರ ಕನ್ನಡ ಸಿನಿರಂಗ ಸ್ವಲ್ಪ ಚೇತರಿಸಿಕೊಂಡು, ಬಿಡುಗಡೆಗೆ ಸಿದ್ದವಾಗಿದ್ದ ಹಲವು ಹೊಸ ಸಿನಿಮಾಗಳನ್ನ ರಿಲೀಸ್ ಮಾಡಿತ್ತು. ನಟ ಅಜಯ್ ರಾವ್ ಅಭಿನಯದ ಕೃಷ್ಣ ಟಾಕೀಸ್, ಲೂಸ್ ಮಾದ ಯೋಗಿ ಅಭಿನಯದ ಲಂಕೇ, ನಟ ಚೇತನ್ ಚಂದ್ರ ಅಭಿನಯದ ಶಾರ್ದೂಲ, ಹಾಗೂ ಸೂರಜ್ ಗೌಡ ಹಾಗೂ ಡಾ.ರಾಜ್ ಮೊಮ್ಮಗಳು ಧನ್ಯಾ ರಾಮ್ ಕುಮಾರ್ ಅಭಿನಯದ ನಿನ್ನ ಸನಿಹಕೆ ಸಿನಿಮಾಗಳು ತೆರೆಕಂಡಿದ್ವು. ಆದ್ರೆ ಕಳೆದ ಒಂದೂವರೆ ತಿಂಗಳಿಂದ ರಿಲೀಸ್ ಆದ ಅಷ್ಟು ಕನ್ನಡ ಸಿನಿಮಾಗಳು
ಆಗಿವೆ. ಯುವ ಮೂವೀಸ್ ಹೆಸರಲ್ಲಿ ಟೆಲಿಗ್ರಾಂ ನಲ್ಲಿ ಸಿನಿಮಾ ಪೈರಸಿ ಮಾಡಿ ಹರಿಬಿಡಲಾಗಿದೆ. ಈ ಬಗ್ಗೆ ಶಾರ್ದೂಲ ಸಿನಿಮಾ ನಿರ್ಮಾಪಕ ರೋಹಿತ್ ಬೆಂಗಳೂರು ಸೆಂಟ್ರಲ್ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.