Select Your Language

Notifications

webdunia
webdunia
webdunia
webdunia

ರವಿಚಂದ್ರನ್ ಮನೆ ಮಾರಾಟ

Crime
ನಗರದ ರಾಜಾಜಿನಗರದಲ್ಲಿರುವ ತಮ್ಮ ಪ್ರೀತಿಯ ಮನೆಯನ್ನು ಖಾಲಿ ಮಾಡಿದ್ದರ ಬಗ್ಗೆ ಮಾತನಾಡಿ, ಮೊದಲ ಬಾರಿಗೆ ವೇದಿಕೆ ಮೇಲೆಯೇ ನಟ ರವಿಚಂದ್ರನ್​ ತುಂಬಾ ಭಾವುಕರಾದರು.
 
ಕಾಮಿಡಿ ಕಿಲಾಡಿಗಳು ಶೋ ವೇದಿಕೆಯಲ್ಲಿ ಮಾತನಾಡಿದ ರವಿಚಂದ್ರನ್​, ಒಂದು ತಿಂಗಳ ಹಿಂದೆ ನಾನು ಮನೆ ಖಾಲಿ ಮಾಡಿದೆ.
ದುಡ್ಡು ಕಳೆದುಕೊಂಡು ಮನೆ ಮಾರಿದ ಎಂದು ಎಲ್ಲರು ಮಾತನಾಡಿಕೊಂಡರು. ಆದರೆ, ನಾನು ದುಡ್ಡನ್ನು ಇಂದು ಕಳೆದಿದ್ದಲ್ಲ. 30 ವರ್ಷದಿಂದಲೂ ಕಳೆದುಕೊಂಡೆ ಬಂದಿದ್ದೇನೆ. ಕಳೆದುಕೊಂಡೇ ನಗುತ್ತಾ ಬಂದಿದ್ದೇನೆ. ಆದರೆ, ಈವರೆಗೂ ನಿಮಗೆ ಯಾರಿಗೂ ಅರ್ಥವಾಗಿಲ್ಲ. ನಾನು ಕಳೆದುಕೊಂಡಿರುವುದೆಲ್ಲ ನಿಮಗಾಗಿ. ನಿಮ್ಮ ಮನಸ್ಸನ್ನು ಗೆಲ್ಲುವುದಕ್ಕಾಗಿ ಎಲ್ಲವನ್ನು ಕಳೆದುಕೊಂಡು ಬಿಟ್ಟಿದ್ದೇನೆ. ಆದರೆ, ನನಗೆ ಬೇಸರ ಇಲ್ಲ. ಮತ್ತೆ ಗೆಲ್ಲುತ್ತೇನೆ ಎಂಬ ಆವೇಶ ಎಂದಿಗೂ ಕಡಿಮೆ ಆಗುವುದಿಲ್ಲ ಎಂದರು.

Share this Story:

Follow Webdunia kannada

ಮುಂದಿನ ಸುದ್ದಿ

ಓಲಾ ಮತ್ತು ಉಬರ್ ಸ್ಥಗಿತ