ಸರ್ಕಾರದ ವಿರುದ್ಧ ಸಮರ ಸಾರುತ್ತಿರುವ ಪಡಿತರ ವಿತರಕರು

Webdunia
ಗುರುವಾರ, 19 ಅಕ್ಟೋಬರ್ 2023 (13:48 IST)
ಇಂದು ರಾಜ್ಯದ ಎಲ್ಲಾ ನ್ಯಾಯಬೆಲೆ‌ ಅಂಗಡಿಗಳು ಬಂದ್ ಆಗಲಿದೆ.ಅನ್ನ ಭಾಗ್ಯದ ಅಕ್ಕಿ ಬದಲು ಹಣ ನೀಡುವುದರ ವಿರುದ್ಧ ಪಡಿತರ ವಿತರಕರು ಸಿಡಿದೆದ್ದಿದ್ದಾರೆ.ಡಿಬಿಟಿ ಇನ್ನೂ ಮುಂದುವರೆಸಿರುವ ಸರ್ಕಾರದ ಕ್ರಮಕ್ಕೆ ಪಡಿತರ ವಿತರಕರು ಆಕ್ರೋಶ ಹೊರಹಾಕಿದ್ದಾರೆ.
 
 ಇಂದು ರೇಷನ್ ವಿತರಣೆ ಬಂದ್ ಮಾಡಲು ಸರ್ಕಾರಿ ಪಡಿತರ ವಿತರಕರ ನಿರ್ಧಾರಿಸಿದ್ದು ,ರಾಜ್ಯದ 20350 ರೇಷನ್ ಅಂಗಡಿಗಳು ಬಂದ್ ಮಾಡಲು ಮುಂದಾಗಿದ್ದು,ಈ ತಿಂಗಳ ಒಳಗಾಗಿ ಹೆಚ್ಚುವರಿ ಅಕ್ಕಿ ವಿತರಣೆಗೆ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ.ಪಡಿತರ ವಿತರಣೆಯನ್ನು ನಂಬಿಕೊಡ ಮಂದಿಗೆ ಸರ್ಕಾರದ ನಡೆಯಿಂದ ಆರ್ಥಿಕ ಸಂಕಷ್ಟ ಉಂಟಾಗಿದೆ.ತಮ್ಮ ಸಮಸ್ಯೆಯ ಕುರಿತು ಸಚಿವರ ಹಾಗೂ ಅಧಿಕಾರಿಗಳ ಗಮನಕ್ಕೆ ತರಲಾಗಿದೆ.ಒಂದೆರೆಡು ತಿಂಗಳು ಅಂತ ಹೇಳಿ DBT ಮುಂದುವರೆಸಿಕೊಂಡು ಬರಲಾಗುತ್ತಿದೆ.ಈ ಕುರಿತಾಗಿ ಸರ್ಕಾರ ಕ್ರಮ ವಹಿಸದೆ ಇದ್ದಲ್ಲಿ ಹೋರಾಟ ತೀವ್ರಗೊಳಿಸುತ್ತೇವೆ ಎಂದು ಸರ್ಕಾರಿ ಪಡಿತರ ವಿತರಕರ ಹಿತರಕ್ಷಣಾ ಸಂಘದ ಅಧ್ಯಕ್ಷ ಜೆ.ಬಿ ಕುಮಾರ್ ಮಾಹಿತಿ ನೀಡಿದ್ದಾರೆ.
 
ರಾಜ್ಯದಲ್ಲಿ 1.14 ಕೋಟಿ ಪಡಿತರ ಚೀಟಿಗಳಿದ್ದು, 4.30 ಕೋಟಿ ಫಲಾನುಭವಿಗಳಿದ್ದಾರೆ.ತಲಾ 5 ಕೆಜಿಯಂತೆ ಅಕ್ಕಿ ವಿತರಣೆ ಮಾಡಲು 2.28 ಲಕ್ಷ ಮೆಟ್ರಿಕ್ ಟನ್ ಬೇಕು.ಅಕ್ಕಿ ಕೊಡಲು ಸಾಧ್ಯವಿಲ್ಲದ ಕಾರಣ ಪ್ರತಿ ವ್ಯಕ್ತಿಗೆ 170 ರೂಪಾಯಿ ನೀಡಲು ಸರ್ಕಾರ ನಿರ್ಧಾರಿಸಿದ್ದು,ಒಂದು ಕೆಜಿ ಅಕ್ಕಿಗೆ ಸರ್ಕಾರ 1.24 ರೂಪಾಯಿ ಕಮಿಷನ್ ನೀಡುತ್ತೆ.ಸರಾಸರಿ ಒಬ್ಬ ಪಡಿತರ ವಿತರಕರಿಗೆ ಸರಾಸರಿ 13 ಸಾವಿರ ರೂಪಾಯಿ ಕೈತಪ್ಪಿ ಹೋಗ್ತಿದೆ 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬಿಸಿಲ ಝಳ ಹೆಚ್ಚಳ: ನೀರಿನ ಸಮಸ್ಯೆಯಾಗದಂತೆ ಕ್ರಮಕ್ಕೆ ಉಡುಪಿ ಡಿಸಿ ಸೂಚನೆ

ಕರ್ನಾಟಕ ಬಜೆಟ್‌: ರಾಜ್ಯದ ವಿವಿಧ ನಗರಕ್ಕೆ ಹೊಸ 12 ಬಜೆಟ್ ಘೋಷಣೆ

ಸಿದ್ದರಾಮಯ್ಯರ ದಾಖಲೆಯ ಬಜೆಟ್ ಬಗ್ಗೆ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ಹೀಗಿತ್ತು

ಸಿದ್ದರಾಮಯ್ಯರ ಬಜೆಟ್‌ನಲ್ಲಿ ಅಲ್ಪಸಂಖ್ಯಾತರಿಗೆ ಮಾತ್ರ ಬೊಕ್ಕಸದ ಪಾಲು

ಸಿದ್ದರಾಮಯ್ಯ ಬಜೆಟ್ ವಿರುದ್ಧ ಖಾಲಿ ಚೊಂಬು ಹಿಡಿದು ಬಿಜೆಪಿ ಪ್ರತಿಭಟನೆ

ಮುಂದಿನ ಸುದ್ದಿ
Show comments